ಶಾಲಾ ವಾರ್ಷಿಕೋತ್ಸವ, ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕುರಿಕೋಟಾ ಗ್ರಾಮದ ಚನ್ನವೀರ ಶಿವಯೋಗಿ ಸ್ಮಾರಕ ಪ್ರೌಢಶಾಲೆಯಲ್ಲಿ ಈಚೆಗೆ 20ನೇ ಶಾಲಾ ವಾರ್ಷಿಕೋತ್ಸವ ಮತ್ತು 10ನೇ ವಿದ್ಯಾರ್ಥಿಗಳಿಗೆ ಬಿಳ್ಗೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಂತ ಕಬೀರದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎಂ. ಬಾವಿದೊಡ್ಡಿ ಮಾತನಾಡಿ, ಈ ಗ್ರಾಮದ ಸುತ್ತಮುತ್ತಲಿನ ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಈ ಶಾಲೆಯು ಅತಿ ಅನುಕೂಲಕರವಾಗಿದೆ ಎಂದರು.
ಸಮಾರಂಭದಲ್ಲಿ ಶ್ರೀದೇವಿ ಬಾವಿದೊಡ್ಡಿ, ಗೀತಾ ಎನ್ ದಾಸ್ಕರ್, ಪದ್ಮಾ, ಶಾಲೆಯ ಸಕಲ ಸಿಬ್ಬಂದಿ, ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಮಂಜುಳಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಂತಾಬಾಯಿ ಶಿವಕುಮಾರ ವಡ್ಡನಕೇರಿ ಸ್ವಾಗತಿಸಿದರು. ರವಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ 10ನೇ ವರ್ಗದಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಒಟ್ಟು 5 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಶಿಕ್ಷಣ ಇಲಾಖೆಯಿಂದ ನೀಡಲಾದ ಪ್ರೋತ್ಸಾಹಧನದ ಚೆಕ್ಗಳನ್ನು ವಿತರಿಸಲಾಯಿತು.