ಸೈಬರ್ ಅಪರಾಧ ತಡೆ ಪ್ರಾತ್ಯಕ್ಷಿಕೆ
ಗುಲ್ಬರ್ಗ: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರಷ) ಯಲ್ಲಿ ಈಚೆಗೆ ಸೈಬರ್ ಅಪರಾಧ ತಡೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಿತು. ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ, ಕೈಗಾರಿಕಾ ತರಬೇತಿ ಸಂಸ್ಥೆಯ ಎನ್ನೆಸ್ಸೆಸ್ ಯೋಜನೆಯಡಿಲ್ಲಿ ನಡೆದ ಕಾರ್ಯಕ್ರಮದಲ್ಲಿ ತಜ್ಞರು ವಿದ್ಯಾರ್ಥಿಗಳಿಗೆ ಸೈಬರ್ ಲೋಕದಲ್ಲಿನ ಅಪರಾಧಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ತಡೆಯುವುದು, ಅದರಿಂದಾಗುವ ಪ್ರಯೋಜನಗಳ ಬಗ್ಗೆ ಹೇಳಿದರು. ಸಿದ್ದಾರ್ಥ ಕಾನೂನು ವಿದ್ಯಾಲಯ ಸಿಬ್ಬಂದಿ ಅನಂತ ಚಿಂಚೂರೆ, ಡಾ. ಚಂದ್ರಶೇಖರ ಇವರು ಸೈಬರ್ ಅಪರಾಧಗಳ ಬಗ್ಗೆ ಸವಿಸ್ತಾರ ಮಾಹಿತಿ ಹೇಳಿದರು. ಸಕೈತ ಸಂಸ್ಥೆ ಪ್ರಾಚಾರ್ಯ ಸಂಕರ ಪಾಂಚಾಳ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲರಾವ್ ಕುಲ್ಕರ್ಣಿ ಸ್ವಾಗತಿಸಿದರು. ಎನ್ನೆಸ್ಸೆಸ್ ಅಧಿಕಾರಿ, ತರಬೇತಿ ಅಧಿಕಾರಿ ವಿಜಯಕುಮಾರ್, ಸಿಬ್ಬಂದಿ ವರ್ಗ ಹಾಗೂ ತರಬೇತುದಾರರು, ವಿದ್ಯಾರ್ಥಿಗಳು ಹಾಜರಿದ್ದರು.