ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

13 ನಾಮಪತ್ರ ವಾಪಸ್, 101 ಅಭ್ಯರ್ಥಿಗಳು ಕಣದಲ್ಲಿ

Mainashree
Updated On : 3 Mar 2013, 12:35 pm

ಕ.ಪ್ರ. ವಾರ್ತೆ, ಆಳಂದ, ಮಾ.2
ಇಲ್ಲಿನ ಪುರಸಭೆಗೆ ಚುನಾವಣೆ ಸ್ಪರ್ಧೆ ಬಯಸಿ 23 ವಾರ್ಡ್ಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಸಿಪಿಐ ಒಳಗೊಂಡು ಪಕ್ಷೇತರರು ಸಲ್ಲಿಸಿದ ಕ್ರಮಮದ್ಧವಾದ 114 ನಾಮಪತ್ರಗಳಲ್ಲಿ 13 ಮಂದಿ ಬುಧವಾರ ತಮ್ಮ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಣದಲ್ಲಿ 101 ಜನ ಕಣದಲ್ಲಿ ಉಳಿದುಕೊಂಡಿದ್ದಾರೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳು ತಮ್ಮ ಮುಖಂಡರು, ಅಭಿಮಾನಿಗಳ ಜೊತೆಗೂಡಿ ವಾರ್ಡ್ಗಳ ಮನೆ ಮನೆಗೆ ತೆರಳಿ ಮತಯಾಚನೆ ಶುರುಮಾಡಿದ್ದಾರೆ.
ಬೋಸಗೆ ಕಣಕ್ಕೆ: ಸ್ಥಳೀಯ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ ಡಿ. ಬೋಸಗೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಾರ್ಡ್ 22ರ ಕ್ಷೇತ್ರಕ್ಕೆ ಸಿಪಿಐ ಅಭ್ಯರ್ಥಿಯಾಗಿ ಕಣದಲಿದ್ದರೆ, ಇನ್ನೊರ್ವ ನ್ಯಾಯವಾದಿ ನಾಗೇಶ ರೆಡ್ಡಿ ಅವರು ಸಾಮಾನ್ಯ ಕ್ಷೇತ್ರ ವಾರ್ಡ್ 4ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ನ್ಯಾಯವಾದಿಗಳು ಸ್ಪರ್ಧೆಗೆ ನಿಂತುಕೊಂಡಿದ್ದಾರೆ.
ಗೊಂದಲ: ವಾರ್ಡ್ 22ರಲ್ಲಿ ಮಂಜುಳಕರ್ ಸೇರಿದಂತೆ ಕೆಲವು ಕುಟುಂಬದ ಸದಸ್ಯರ ಮತಪಟ್ಟಿಯಲ್ಲಿ ಹೆಸರೆ ಇಲ್ಲ.
ಮತದಾನದ ಗುರುತಿನ ಚೀಟಿಗಳಿವೆ. ಆದರೆ ಮತಪಟ್ಟಿಯಲ್ಲಿ ಹೆಸರು ಇಲ್ಲ. ಫೋಟೋ ಇಲ್ಲದಾಗಿರುವುದು ಅಲ್ಲಲ್ಲಿ ಗೊಂದಲ ಸೃಷ್ಟಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಚೇರಿ ಉದ್ಘಾಟನೆ: ಚುನಾವಣೆ ಅಂಗವಾಗಿ ಕಾಂಗ್ರೆಸ್ ಪಕ್ಷದಿಂದ ವಾರ್ಡ್ 13ರಲ್ಲಿ ಪಕ್ಷದ ಅಧ್ಯಕ್ಷ ಶಂಕರರಾವ ದೇಶಮುಖ ಕಚೇರಿಯನ್ನು ಉದ್ಘಾಟಿಸಿದರು. ಮುಖಂಡ ಜಗನಾಥ ಶೇಗಜಿ, ಬಾಬುರಾವ ಫುಲಾರ, ಬಸವರಾಜ ನೆಲ್ಲೂರ ಪಾಲ್ಗೊಂಡಿದ್ದರು.
ಜೆಡಿಎಸ್ ಶಾಸಕ ಸುಭಾಷ ಗುತ್ತೇದಾರ ಜೆಡಿಎಸ್ ಚುನಾವಣೆ ಪ್ರಚಾರ ಕಚೇರಿಯನ್ನು ಕೆಲವು ವಾರ್ಡ್ಗಳಲ್ಲಿ ಉದ್ಘಾಟನೆ ಕೈಗೊಂಡರು. ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಹುಟ್ಟುಹಬ್ಬ: ಬಿ.ಎಸ್. ಯಡಿಯೂರಪ್ಪ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣ ಎದುರಿನಲ್ಲಿ ಬುಧವಾರ ಕೆಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್, ಮೋಹನಗೌಡ ಪಾಟೀಲ್, ವಿಠ್ಠಲರಾವ ಪಾಟೀಲ್, ಶರಣಬಸಪ್ಪ ವಾಗೆ, ಮಲ್ಲಿಕಾರ್ಜುನ ಪಾಟೀಲ್ ಸಕ್ಕರಗಾ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement