ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ: ದರ್ಶನಾಪುರ

Lingaraj Badiger
Updated On : 4 Mar 2013, 11:32 am

ಶಹಾಪುರ: ಪಟ್ಟಣದ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಹಿಂದಿನ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಶಹಾಪುರವನ್ನು ಇಡೀ ಜಿಲ್ಲೆಯಲ್ಲಿ ಗಮನ ಸೆಳೆಯುವ ಕೇಂದ್ರವನ್ನಾಗಿ ಮಾಡಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣದ ಇಂದಿರಾ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದಪ್ಪ ಚಂದ್ರಶೇಖರ ಆರಬೋಳ ಅವರ ಪರವಾಗಿ ಮನೆಮನೆಗೆ ತೆರೆಳಿ ಮತಯಾಚಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಆರಿಸಿ ತರುವಲ್ಲಿ ಮತದಾರರು ಸಹಕಾರ ನೀಡಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತಾರತಮ್ಯ ಮಾಡದೇ ಸಾಮಾಜಿಕ ನ್ಯಾಯದಡಿ ಎಲ್ಲ ವರ್ಗದ ಜನತೆಯ ಆಶೋತ್ತರಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸಲಾಗುವುದು. ಪಟ್ಟಣದಲ್ಲಿ ರಸ್ತೆ ಅಗಲೀಕರಣ, ಸಮುದಾಯ ಭವನ, ಚರಂಡಿ ವ್ಯವಸ್ಥೆ, ವಿದ್ಯುತ್ ಕಂಬಗಳ ಜೋಡಣೆ, ಮಹಿಳೆಯರಿಗಾಗಿ ಶೌಚಾಲಯಗಳು ಹೀಗೆ ಹಲವು ಕಾಮಗಾರಿ ನಿರ್ವಹಿಸಿದ್ದು ಮುಂದಿನ ದಿನಗಳಲ್ಲಿ ಕುಡಿವ ನೀರಿಗಾಗಿ ಕೃಷ್ಣಾ ನದಿ ನೀರಿನ ಜೊತೆಗೆ ಭೀಮಾ ಬ್ಯಾರೇಜ್‌ನಿಂದಲೂ ನೀರು ಸರಬರಾಜು ಮಾಡುವ ಯೋಜನೆ ಬಹು ಮುಖ್ಯವಾಗಿದೆ ಎಂದರು. ಅಭಿವೃದ್ಧಿಗೆ ಆದ್ಯತೆ: ಶಹಾಪುರ ಪಟ್ಟಣ ದಿನಗಳೆದಂತೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಬಡಾವಣೆಗಳ ವ್ಯಾಪ್ತಿ ಹೆಚ್ಚಾಗುತ್ತಿದೆ. ಪುರಸಭೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಜನ ಆಶೀರ್ವದಿಸಿದರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವದು ಎಂದರು. ಸುರೇಂದ್ರ ಪಾಟೀಲ ಮಡ್ನಾಳ, ಸಿದ್ಲಿಂಗಣ್ಣಾ ಆನೇಗುಂದಿ, ಸಣ್ಣನಿಂಗಣ್ಣ, ಗುಂಡಪ್ಪ ತುಂಬಗಿ, ಗೋಪಾಲ ಸುರಪುರ, ವೆಂಕಟೇಶ, ಚಂದ್ರು
ಸಿರನೂರ, ಬಸವರಾಜ ಕಡಗಂಚಿ, ಮಹಾದೇವಪ್ಪ ಬಬಲಾದಿ, ರುದ್ರಪ್ಪ ಹುಲಿಮನಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement