ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರ ಪಟ್ಟಣ ಪ್ರಗತಿಗೆ ಬದ್ಧ: ರಾಜುಗೌಡ

Lingaraj Badiger
Updated On : 4 Mar 2013, 11:32 am

ಸುರಪುರ: ರಂಗಂಪೇಟೆಯ ಹಸನಾಪುರ, ಕುರೇಶಿ ಮೊಹಲ್ಲಾ, ಪರ್ನಾಲಾ ಮೊಹಲ್ಲಾ, ಶರ್ಕಿ ಮೊಹಲ್ಲಾ, ದೂಲಪೇಟ, ಬೀಚಮೊಹಲ್ಲಾ, ಮಂಗಲ ಬಜಾರ್ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಮಾಜಿ ಸಚಿವ ರಾಜುಗೌಡ ಅವರು ತಮ್ಮ ಬೆಂಬಲಿಗ ಅಭ್ಯರ್ಥಿಗಳ ಪರವಾಗಿ ಭಾನುವಾರ ಬಿರುಸಿನ ಪ್ರಚಾರ ಕೈಗೊಂಡರು.
ಮತ ಪ್ರಚಾರದ ಸಂದರ್ಭದಲ್ಲಿ ಎಲ್ಲ ವಾರ್ಡುಗಳಲ್ಲಿ ಮತದಾರರು ರಾಜುಗೌಡರಿಗೆ ಅದ್ಧೂರಿ ಸ್ವಾಗತ ಕೋರಿದರು. ಮಹಿಳಾ ಮತದಾರರು ಮಾಜಿ ಸಚಿವ ರಾಜುಗೌಡರನ್ನು ಕೊಮಟಿ ಗಲ್ಲಿಯಲ್ಲಿ ತಮ್ಮ ಮನೆಯಲ್ಲಿ ಕರೆದು ಹೂಮಾಲೆ ಹಾಕಿ ಹಣೆಗೆ ತಿಲಕವಿಟ್ಟು ಆರತಿ ಮಾಡಿ ಸಿಹಿ ತಿನಿಸಿದರು.
ಮರೆಯಲಾಗದ ಕ್ಷಣ: ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ, ಬೇರೆ ಪಟ್ಟಣಗಳಲ್ಲಿ ಮತಯಾಚನೆಗೆ ಹೋದಾಗ ನಾಗರಿಕರಿಂದ ದೂರುಗಳು, ಆರೋಪಗಳು, ಶಪಿಸುವುದು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ರಂಗಂಪೇಟೆಯ ಜನತೆ ತಮ್ಮ ಮನೆಯಲ್ಲಿ ಕರೆದು ಹಾರ ಹಾಕಿ ಸತ್ಕರಿಸಿ, ಆರತಿ ಮಾಡಿ ಸಿಹಿ ತಿನಿಸಿ ಆಶೀರ್ವದಿಸುವುದು ನನ್ನ ಜೀವಮಾನದಲ್ಲಿ ಮರೆಯಲಾಗದ ಅಭೂತಪೂರ್ವ ಕ್ಷಣ ಎಂದು ಭಾವುಕರಾಗಿ ನುಡಿದರು. ನಾನು ಸಚಿವನಾದಾಗಲೂ ಇಂತಹ ಸ್ವಾಗತ, ಸತ್ಕಾರ ಕಂಡಿರಲಿಲ್ಲ. ಆದರೆ ಮತಯಾಚನೆಯಲ್ಲಿ ಸತ್ಕರಿಸಿದಕ್ಕೆ ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಮತ್ತು ನಾನು ಶಾಸಕನಾಗಿದ್ದಕ್ಕೂ ಸಾರ್ಥಕವಾಯಿತು ಎಂ ದರು.
ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಪಟ್ಟಣದ ಎಲ್ಲ ವಾರ್ಡುಗಳಲ್ಲಿ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಪಟ್ಟಣದಲ್ಲಿ ಮೂಲ ಸೌಲಭ್ಯಗಳಾದ ಶೌಚಾಲಯ, ಸಿಸಿ ರಸ್ತೆ, ಹೈಮಾಸ್ಟ್, ಪಾರ್ಕ್ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ವಿವಿಧ ಭವನಗಳ ನಿರ್ಮಾಣ ಸೇರಿದಂತೆ ಕುಡಿವ ನೀರಿನ ಶಾಶ್ವತ ಪರಿಹಾರಕ್ಕಾಗಿ 40 ಲಕ್ಷ, ಒಳಚರಂಡಿ ನಿರ್ಮಾಣಕ್ಕಾಗಿ 23 ಕೋಟಿ ಒದಗಿಸಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳೇ ನನ್ನ ಬೆಂಬಲಿಗ ಅಭ್ಯರ್ಥಿಗಳ ಗೆಲವಿಗೆ ಶ್ರೀರಕ್ಷೆಯಾಗಲಿವೆ. ಪಟ್ಟಣದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಕಾರಣ ನನ್ನ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ತರಬೇಕೆಂದು ಮನವಿ ಮಾಡಿದರು. ಮುಖಂಡರಾದ ರಾಜಾ ಹನುಮಪ್ಪನಾಯಕ, ಚಂದ್ರಶೇಖರ ಜಡಿಮರಳ, ಚಂದ್ರಶೇಖರ ಅವಂಟಿ, ಚಂದ್ರಕಾಂತ ಕಡೇಚೂರು, ಡಾ. ಎಸ್.ಎಸ್. ಪೂಜಾರಿ, ಸೋಮಶೇಖರ ಶಾಬಾದಿ, ಲಕ್ಷ್ಮಯ್ಯ ಕಲಕುಂಡಿ, ಕೃಷ್ಟಯ್ಯ ಕಲಕುಂಡಿ, ರಾಮಾಂಜನಯ ಪೋಲಂಪಲ್ಲಿ, ಗುರುರಾಜ ಪೋಲಂಪಲ್ಲಿ, ಏಜಾಜ್ ಅಹ್ಮದ ಚಿದ್ರಿ, ಇಸ್ಮಾಯಿಲ್ ಬಳಿಚಕ್ರ, ಪ್ರಕಾಶ ಗುತ್ತೇದಾರ, ಚೆನ್ನಬಸಪ್ಪ ಚೆಟ್ಟಿ, ಯಜ್ಞೇಶ್ವರ ಭಟ್, ವೆಂಕಟೇಶ್ವರ ಗದ್ವಾಲ್ ಸೇರಿದಂತೆ ವಿವಿಧ ವಾರ್ಡಿನ ಅಭ್ಯರ್ಥಿಗಳಾದ ಭೀಮಾಶಂಕರ ಬಿಲ್ಲವ್, ತಾತಯ್ಯ ಕಡಬೂರ್, ಖಾಲೀದ ಅಹ್ಮದ್ ತಾಳಿಕೋಟ, ನಾಸೀರಹುಸೇನ ಕುಂಡಾಲೆ, ಬಸವರಾಜ ಯರಸಂ, ಹಣ್ಮಂತ ಚಂದನಕೇರಿ, ಭಾಗ್ಯಶ್ರೀ ಡೊಳ್ಳೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement