ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚುನಾವಣಾ ಕರ್ತವ್ಯದ ಸಿಬ್ಬಂದಿಗೆ ಬಸ್ ಸೌಲಭ್ಯ

Lingaraj Badiger
Updated On : 5 Mar 2013, 10:57 am

ಯಾದಗಿರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಪ್ರಕ್ರಿಯೆ ಜರುಗುತ್ತಿದ್ದು, ತಾಲೂಕಾ ಕೇಂದ್ರಗಳಿಗೆ ಚುನಾವಣೆ ಕರ್ತವ್ಯದ ಮೇಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾ.6ರಂದು ಮಸ್ಟರಿಂಗ್ ಕಾರ್ಯಕ್ಕಾಗಿ ತೆರಳುವುದಕ್ಕಾಗಿ ಹಾಗೂ ಮಾ. 7ರಂದು ಡಿಮಸ್ಟರಿಂಗ್ ನಂತರ ಕೇಂದ್ರಗಳಿಗೆ ಮರಳುವುದಕ್ಕಾಗಿ ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ.
ಮಸ್ಟರಿಂಗ್ ದಿನವಾದ ಮಾ. 6ರಂದು ಬೆ.6ಕ್ಕೆ ಯಾದಗಿರಿಯಿಂದ ಶಹಾಪುರಕ್ಕೆ ಹೋಗಲು ಸಹಾಯಕ ಆಯುಕ್ತರ ಕಚೇರಿ ಅವರಣದಲ್ಲಿ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಯಾದಗಿರಿಯಿಂದ ಸುರಪುರಕ್ಕೆ ಹೋಗಲು ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ 2 ಬಸ್‌ಗಳು, ಶಹಾಪುರದಿಂದ ಯಾದಗಿರಿ ಹೋಗಲು ಶಹಾಪುರ ತಹಸೀಲ್ದಾರ್ ಕಚೇರಿ ಆವರಣದಿಂದ 2 ಮತ್ತು ಸುರಪುರದಿಂದ ಯಾದಗಿರಿ ಹೋಗಲು ತಹಸೀಲ್ದಾರ್ ಕಚೇರಿ ಆವರಣ ಸುರಪುರದಿಂದ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಮಾ. 7ರಂದು ಡಿಮಸ್ಟರಿಂಗ್ ದಿನದಂದು ಸಂಜೆ 6.30ಕ್ಕೆ ಯಾದಗಿರಿಯಿಂದ ಶಹಾಪುರಕ್ಕೆ, ಸುರಪುರಕ್ಕೆ ಹೋಗಲು ಡಾನ್ ಬಾಸ್ಕೋ ಶಾಲೆ ಆವರಣದಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಶಹಾಪುರದಿಂದ ಯಾದಗಿರಿ ಹೋಗಲು ಶಹಾಪುರ ತಹಸೀಲ್ದಾರ್ ಕಚೇರಿ ಆವರಣದಲ್ಲಿ 2 ಬಸ್, ಸುರಪುರದಿಂದ ಯಾದಗಿರಿ ಹೋಗಲು ಅಲ್ಲಿಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement