ಧರ್ಮದಿಂದ ನಡೆದಾಗ ಸಮಾಜದಲ್ಲಿ ಶಾಂತಿ: ಬಾಗ್ಲಿ
ಯಾದಗಿರಿ: ದಿನದಿಂದ ದಿನಕ್ಕೆ ದಾರಿ ತಪ್ಪುತ್ತಿರುವ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮಾಡಬೇಕಾದರೆ ಮಾನವನು ಧರ್ಮದ ಮಾರ್ಗದಲ್ಲಿ ನಡೆದಾಗ ಮಾತ್ರ ಸಾಧ್ಯ ಎಂದು ಬಸವರಾಜಪ್ಪ ಬಾಗ್ಲಿ ಹೇಳಿದರು.
ತಾಲೂಕಿನ ತಾತಳಗೇರಾದಲ್ಲಿ ಗಂಗಾ ಪರಮೇಶ್ವರಿಯ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡಿದರು. ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಮಹಾಲಿಂಗಯ್ಯ ಸ್ವಾಮೀಜಿ ಬೋರಗಿ, ಖಾಸಾಮಠದ ಶಾಂತವೀರ ಸ್ವಾಮೀಜಿ, ಅರಕೇರಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಿವು ಮುತ್ಯಾ ಠೋಕಾಪುರ ನೇತೃತ್ವ ವಹಿಸಿದ್ದರು. ಟೋಕರಿ ಕೋಲಿ ಸಮಾಜದ ಪ್ರಮುಖರು ಇದ್ದರು.