ನಾಳೆ ಗಡೇದುರ್ಗಮ್ಮ ದೇವಿ ಜಾತ್ರೆ
ಸುರಪುರ: ಪಟ್ಟಣದ ಗಡೇದುರ್ಗಮ್ಮ ದೇವಿಯ ಜಾತ್ರೆ ಗುರುವಾರದಿಂದ ಆರಂಭವಾಗಲಿದೆ ಎಂದು ದೇವಸ್ಥಾನದ ಅರ್ಚಕ ಛತ್ರಪ್ಪ ಪೂಜಾರಿ ತಿಳಿಸಿದ್ದಾರೆ. ಮಾ. 7ರಂದು ದೇವಿಯು ತವರು ಮನೆಗೆ ಪಯಣ, 8ರಂದು ದೇವಿಯ ತವರು ಮನೆಯಲ್ಲಿ ಮಹಾಪೂಜೆ ಹಾಗೂ ಪ್ರಸಾದ, 9ರಂದು ದೇವಿ ಗಂಗಾಸ್ಥಾನಕ್ಕೆ ಶೆಳ್ಳಗಿ ಗಂಗಾ ಮಂಟಪ್ಪಕ್ಕೆ ಪಯಣ, 10ರಂದು ದೇವಿ ಗಂಗಾಸ್ನಾನ ಮತ್ತು ಪಲ್ಲಕ್ಕಿ ಸೇವೆ, 11ಮಹಾಸೇವೆ ಅಗ್ನಿಕೊಂಡ ತುಳಿಯುವುದು. ಮಹಾಪ್ರಸಾದ ವಿತರಣೆ, 12ರಂದು ಸಂಜೆ ಮಹಾಪ್ರಸಾದ ಸೇವೆ, ರಾತ್ರಿ ದೇವಿ ಗರ್ಭಗುಡಿ ಪ್ರವೇಶದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.