ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಹಿತಿ ಕಾ.ತ.ಚಿಕ್ಕಣ್ಣಗೆ ಕನಕಶ್ರೀ ಅಭಿನಂದನೆ

Lingaraj Badiger
Updated On : 6 Mar 2013, 11:07 am

ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2011ನೇ ಸಾಲಿನ ಕನಕಶ್ರೀ ಪ್ರಶಸ್ತಿಗೆ ರಾಜ್ಯದ ಕಥೆಗಾರ ಕಾ.ತ. ಚಿಕ್ಕಣ್ಣ ಆಯ್ಕೆಯಾಗಿದ್ದು, ಅವರನ್ನು ಲೋಕ ಸಾಂಸ್ಕೃತಿಕ ಒಕ್ಕೂಟದ ಜಿಲ್ಲಾ ಸಂಚಾಲಕ ಶ್ರೀಶೈಲ ಪೂಜಾರ ಅಭಿನಂದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿಗೆ ಭಾಜನರಾದ ಕಾ.ತ. ಚಿಕ್ಕಣ್ಣ ಅವರ ಸಾಹಿತ್ಯಕ ಕೊಡುಗೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. ಕಾತ ಚಿಕ್ಕಣ್ಣ ಅವರಿಗೆ ಕನಕಶ್ರೀ ಪ್ರಶಸ್ತಿ ಸಂದಿರುವುದಕ್ಕೆ ಹಿರಿಯ ಸಾಹಿತಿ ವೆಂಕಣ್ಣ ಅಲೆಮನಿ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ವಿಶ್ವನಾಥರೆಡ್ಡಿ ಗೊಂದೆಡಿಗಿ, ಡಾ.ಭೀಮರಾಯ ಲಿಂಗೇರಿ, ಮಲ್ಲಣ್ಣ ಐಕೂರು, ಗುರಪ್ಪಾಚಾರ್ ವಿಶ್ವಕರ್ಮ, ಮಂಜುಳಾ ಪಾಟೀಲ್, ವಿ.ಎಸ್. ಹಿರೇಮಠ, ಮಲ್ಲಿಕಾರ್ಜುನ ಕರ್ಕಳ್ಳಿ, ಗೌಸ್ ಪಟೇಲ್  ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಆರೋಗ್ಯ ಚಿಕಿತ್ಸಾ
ಶಿಬಿರದ ಪ್ರಯೋಜನೆ ಪಡೆಯಲು ಸಲಹೆ
ಯಾದಗಿರಿ: ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಬೇಕೆಂದು ಆಯುಷ್ಯ ಇಲಾಖೆ ಜಿಲ್ಲಾ ಅಧಿಕಾರಿ ಡಾ.ವಂದನಾ ಗಾಳಿ ಹೇಳಿದರು. ತುಮಕೂರು ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೋಮಿಯೋಪತಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಡಾ. ಎ.ಡಿ. ಗಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಕಾಂತ ಕರದಳ್ಳಿ, ಡಾ. ಇಫ್ತಿಕಾರ, ಡಾ. ವಜೀರ್, ಡಾ. ಹಣಮಂತ, ಡಾ. ಪ್ರೇಮಾ ರಾಜಾಪುರ ಇದ್ದರು. ಡಾ. ಪ್ರಕಾಶ ರಾಜಾಪುರ ಸ್ವಾಗತಿಸಿದರು. ಡಾ. ದೀಪಾ ರಾಠೋಡ ವಂದಿಸಿದರೆ, ಶಿಕ್ಷಕ ಭೋಜಪ್ಪ ನಿರೂಪಿಸಿದರು.
ಜನಾರ್ದನ ಕಟ್ಟಿ
ಗುಲ್ಬರ್ಗ: ಲೋಕೋಪಯೋಗಿ ಇಲಾಖೆ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಜನಾರ್ದನ ಸುಬ್ಬಣ್ಣಾಚಾರ್ಯ ಕಟ್ಟಿ ಮಾ.5ರಂದು ಬೆ.10.30 ಕ್ಕೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿದ್ದು, ವರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಇಲ್ಲಿನ ಚಿತ್ತಾರಿ ಅಡ್ಡೆ ಬಳಿಯ ಚಿತಾಗಾರದಲ್ಲಿ ನೆರವೇರಿತು. ನವಲಿ ಕೃಷ್ಣಾಚಾರ್ಯ, ಪಾಂಡುರಂಗರಾವ ಕಂಪ್ಲಿ, ಗೋಪಾಲಾಚಾರ್ಯ, ನರಸಿಂಹಾಚಾರ್ಯ, ಹಣಮಂತಾಚಾರ್ಯ, ವ್ಯಾಸರಾಜ ಸಂತೆಕೆಲ್ಲೂರ, ಪ್ರೊ. ಪ್ರಹ್ಲಾದ ಭುರ್ಲಿ, ರಾಘವೇಂದ್ರ ಕುಲಕರ್ಣಿ ಕೋಗನೂರ, ಶೇಷಗಿರಿ ಲಾತೂರಕರ್, ನರಹರಿ ಪಾಟೀಲ್, ಪ್ರಹ್ಲಾದ ಮಟಮಾರಿ ಹಲವಾರು ಜನರು ಪಾಲ್ಗೊಂಡಿದ್ದರು. ಎಂಎಲ್ಸಿ ನಮೋಶಿ, ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಾ. ಮುರಲೀಧರ ಎಸ್. ರಾವ್, ಕಾರ್ಯದರ್ಶಿ ಶಾಮರಾವ ಖಣಗೆ, ಡಾ. ಗೌತಮ ಜಹಗೀರದಾರ, ಪ್ರಭಾಕರ ಸಾತಖೇಡ ಮತ್ತಿತರ ಹಲವಾರು ಗಣ್ಯರು ಕಟ್ಟಿ ಅವರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ವಿತರಿಸಿ ಅಂತಿಮ ನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement