ಆಕಸ್ಮಿಕ ಬೆಂಕಿಗೆ ಮನೆ ಭಸ್ಮ: ಮೌಲ್ಯಯುತ ಸಾಮಗ್ರಿ ಹಾನಿ
ಸುರಪುರ: ಸಮೀಪದ ರಂಗಂಪೇಟೆ ದೂಲಪೇಟ ಮೊಹಲ್ಲಾದಲ್ಲಿ ಬುಧವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ.
ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ ಎಂಬುವರಿಗೆ ಸೇರಿದ್ದ ಮನೆಯೇ ಇದಾಗಿದೆ. ಬೆಂಕಿ ದುರಂತದಿಂದ ಮನೆಯಲ್ಲಿದ್ದ ಬಟ್ಟೆ, ಅಕ್ಕಿ, ಜೋಳ, ಬೇಳೆ ಮತ್ತಿತರ ದಿನಬಳಕೆ ವಸ್ತುಗಳು ಸಂಪೂರ್ಣವಾಗಿ ಸುಟ್ಟಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಮಾಜಿ ಸಚಿವ ರಾಜುಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಚಂದ್ರಶೇಖರ ಗೌಡ ಮಾಗನೂರು, ಚಂದ್ರಕಾಂತ ಕಡೇಚೂರು, ನಾಸೀರ ಕುಂಡಾಲೆ, ಖಾಲಿದ್ ಅಹ್ಮದ್ ತಾಳಿಕೋಟಿ, ಹುಸ್ಮಾನ ಸಾಬ್ ಅಲಾತೆ ಇದ್ದರು.