ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿತ್ಯಾನಂದನ ಪ್ರತಿಕೃತಿ ದಹನ: ಪ್ರತಿಭಟನೆ

Lingaraj Badiger
Updated On : 7 Mar 2013, 11:19 am

ಯಾದಗಿರಿ: ನಿತ್ಯಾನಂದ ಉತ್ತರ ಕರ್ನಾಟಕಕ್ಕೆ ಕಾಲಿಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ನಿತ್ಯಾನಂದನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯ ಮುದೋಳ ಮಹಾಲಿಂಗಪುರ ಮಠಕ್ಕೆ ಪೀಠಾಧಿಪತಿಯಾಗಲು ನಿತ್ಯಾನಂದ ಕುತಂತ್ರ ಹೆಣೆದಿದ್ದಾನೆ. ವಿವಾದಿತ ಹಾಗೂ ಚಾರಿತ್ರ್ಯರಹಿತ ನಿತ್ಯಾನಂದ ಉತ್ತರ ಕರ್ನಾಟಕಕ್ಕೆ ಕಾಲಿಡಬಾರದು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು. ನಿತ್ಯಾನಂದನ ಪ್ರತಿಕೃತಿಗೆ ಪೊರಕೆ ಸೇವೆ ಮಾಡಿ, ನಂತರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹೇಳಿಕೆಗೆ ಖಂಡನೆ: ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಮಹಾಲಿಂಗಪುರ ಮಹಾಲಿಂಗೇಶ್ವರ ಮಠಕ್ಕೆ ಪೀಠಾಧಿಪತಿಯಾಗುವುದಾಗಿ ನಿತ್ಯಾನಂದ ನೀಡಿರುವ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.
ಈ ಹೇಳಿಕೆಯಿಂದ ಅನೇಕ ಮಠಾಧೀಶರು ಹಾಗೂ ಕನ್ನಡಿಗರಿಗೆ ಬಹಳಷ್ಟು ಆಕ್ರೋಶ ಉಂಟಾಗಿದೆ. ಕರ್ನಾಟಕದ ಮಠಗಳು ಭವ್ಯ ಪರಂಪರೆ ಹಾಗೂ ಇತಿಹಾಸವುಳ್ಳದ್ದಾಗಿದೆ. ಇಲ್ಲಿಯ ಮಠಾಧೀಶರೂ ಸಂಸ್ಕೃತಿ, ಪರಂಪರೆ ಉಳ್ಳವರಾಗಿದ್ದು, ಸಮಾಜವನ್ನು ತಿದ್ದುವ ಚೇತನರಾಗಿದ್ದಾರೆ. ಆದರೆ ನಿತ್ಯಾನಂದ ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವ ಹೊಂದಿದವನಾಗಿದ್ದಾನೆ. ಆತ ನಮ್ಮ ನೆಲಕ್ಕೆ ಯಾವುದೇ ಕಾರಣಕ್ಕೂ ಕಾಲಿಡಬಾರದು. ಅವನನ್ನು ಕರ್ನಾಟಕದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಹೋರಾಟದ ಎಚ್ಚರಿಕೆ: ಒಂದು ವೇಳೆ ಮಹಾಲಿಂಗಪುರ ಮಠದ ಸ್ವಾಮೀಜಿ ನಿತ್ಯಾನಂದನನ್ನು ಆಹ್ವಾನಿಸಿದರೆ ಕನ್ನಡಪರ ಸಂಘಟನೆ ಹಾಗೂ ಭಕ್ತರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು. ಇದಕ್ಕೆ ಆಸ್ಪದ ನೀಡದೇ ನಿತ್ಯಾನಂದನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ದೇವು ಪಾಟೀಲ್, ಸಿದ್ದುರೆಡ್ಡಿ ತಂಗಡಗಿ, ಬಾಪು, ಬಾಬು, ಮುತ್ತುಗೌಡ, ರಾಜಶೇಖರ, ಭೀಮರಾಯ, ಭೀಮಾಶಂಕರ, ಸುರೇಶ, ಶಿವಕುಮಾರ, ಸಂಗಮೇಶ್ವರ ಸಾಗರ, ವೆಂಕಟೇಶ, ಹಣಮಂತ್ರಾಯ, ಸಾಬಣ್ಣ, ರವಿ, ಗೌಡಪ್ಪ ಕೋರಿ, ಬಸವರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement