ಶಹಾಪುರ ಪುರಸಭೆ: ಶೇ.63.26ರಷ್ಟು ಮತದಾನ
ಶಹಾಪುರ: ಇಲ್ಲಿನ ಪುರಸಭೆಯ 23 ವಾರ್ಡುಗಳ ಚುನಾವಣೆ 42 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಜರುಗಿದ್ದು, ಶೇ.63,26 ರಷ್ಟು ಮತದಾನವಾಗಿದೆ.
ಮತದಾನ ಮಾಡಲು ಬೆಳಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಹುರುಪಿನಿಂದ ಮತದಾನ ಮಾಡಿದ ಜನ ಸೂರ್ಯ ನೆತ್ತಿ ಮೇಲೆ ಬಂದರೂ ಬಿಸಿಲನ್ನು ಲೆಕ್ಕಿಸದೇ ಮತಗಟ್ಟೆಯ ಬಳಿ ಹುರುಪಿನಿಂದ ತಮ್ಮ ಹಕ್ಕು ಚಲಾಯಿಸಿದರು. ವಯೋವೃದ್ಧರು ಅಂಗವಿಕಲರು, ಯುವಕರು ಮಹಿಳೆಯರು ಸರದಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ದೂರದ ಊರಲ್ಲಿದ್ದವರು ಬರುವಿಕೆಗೆ ನಿಲ್ದಾಣದಲ್ಲಿ ಕಾತುರದಿಂದ ಅನೇಕರು ಕಾಯುತಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಯಾವುದೇ ಅಹಿತರಕರ ಘಟನೆ ಸಂಭವಿಸಿಲ್ಲ.