ಗುತ್ತೇದಾರ ಸ್ಮರಣಾರ್ಥ 3ನೇ ವಾರ್ಷಿಕೋತ್ಸವ
ಅಫಜಲ್ಪುರ: ಸ್ಟೇಷನ್ ಗಾಣಗಾಪುರದಲ್ಲಿ ಅಶೋಕ ವೆಂಕಯ್ಯ ಗುತ್ತೇದಾರ ಸ್ಮರಣಾರ್ಥ ಶಾಂತಿನಿಕೇತನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು.
ಡಾ. ಅಜಯ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದಾಗ ಅವರ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಹಾಗೂ ಅವರ ಪ್ರತಿಭೆಯನ್ನು ಹೊರತರಲು ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಏರ್ಪಡಿಸಿರುವುದು ಸಂತೋಷದ ವಿಷಯ. ಕಳೆದ ವರ್ಷಗಿಂತ ಈ ವರ್ಷ ಮಕ್ಕಳು ಹೆಚ್ಚು ಪ್ರಗತಿಯನ್ನು ಹೊಂದಿದ್ದಾರೆ. ಇದರಲ್ಲಿ ಶಿಕ್ಷಕರ ಪಾತ್ರ ಕೂಡ ಮಹತ್ವ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡ ವೀರಯ್ಯ ಸ್ವಾಮಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಮೌಲ್ಯ ಶಿಕ್ಷಣದ ಜೊತೆಗೆ ಒಳ್ಳೆಯ ಶಿಕ್ಷಣ ಈ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಮಕ್ಕಳು ಓದಿ ಅನೇಕ ಹುದ್ದೆಗಳನ್ನು ಪಡೆದುಕೊಳ್ಳಲಿ ಹಾಗೂ ಅನೇಕ ಸ್ಪರ್ಧಾತ್ಮಕವಾಗಿ ಉನ್ನತ ಮಟ್ಟಕ್ಕೇರಲಿ ಎಂದರು.
ಡಾ. ಎಸ್.ಬಿ. ಜೋಷಿ, ಶ್ರೀಕೃಷ್ಣ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷಯ ಗುತ್ತೇದಾರ, ಗೌರಮ್ಮ ಸುಂದರರಾಜ ಮೈಸೂರ, ರಾಜಲಕ್ಷ್ಮಿ ಸೋಲಾಪುರ, ಜಮುನಾದೇವಿ ಗುತ್ತೇದಾರ, ಅನಂತರಾವ್ ಟಿಕೋಳೆ, ಪರಶುರಾಮ ಸಿಂಧೆ, ಪುಂಡಲಿಕ್ ಬಿಲಕರ್, ಸಂಸ್ಥೆಯ ಕಾರ್ಯದರ್ಶಿ ನಾಮದೇವ ಬಿಲಕರ, ಡಾ. ಎಚ್.ಎಲ್ ಕುಡಕಿ, ಪ್ರಕಾಶ ಪಟ್ಟಣಕರ್, ಗೋಪಾಲ ಕೋಠಾರಿ, ಬೀರಪ್ಪ ನಾಯಕೋಡಿ, ಸಂಗಮನಾಥ ಲೋಣಿ, ಸಲೀಮಪಾಶಾ, ಯುಸುಫ್ ಮುಲ್ಲಾ, ಇರ್ಫಾನ್ ಜಮಾದಾರ ಹಾಗೂ ಶ್ರೀನಿವಾಸ ಭಾಗವಹಿಸಿದ್ದರು. ದತ್ತಾತ್ರೇಯ ಬಿಲಕರ್ ಸ್ವಾಗತಿಸಿ, ನಿರೂಪಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.