'ದುರ್ಬಲ ವರ್ಗದ ಏಳ್ಗೆಗೆ ಶ್ರಮಿಸಿ'
ಶಹಾಪುರ: ಸಹಕಾರ ಸಂಘಗಳು ದೀನ ದಲಿತರು, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರ ಏಳಿಗೆಯನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ಕೆಲಸ ಮಾಡಬೇಕೆಂದು ಶಾಸಕಶರಣಬಸವಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಕಲ್ಯಾಣ ಕರ್ನಾಟಕ ವಿವಿಧೋದ್ದೇಶ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ರಾಷ್ಟ್ರೀಕೃತ ಬ್ಯಾಂಕ್ಗಳ ಜೊತೆಗಿನ ಆರೋಗ್ಯಕರ ಪೈಪೋಟಿಯನ್ನು ಎದುರಿಸಿಕೊಂಡು ಸಹಕಾರ ಸಂಘಗಳು ಬೇಳೆಯಬೇಕು. ಅಂದಾಗ ಮಾತ್ರ ಸಹಕಾರ ತತ್ವ-ಸಿದ್ಧಾಂತಗಳಿಗೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವಯ್ಯ ಶರಣರು ಗದ್ದುಗೆ, ಸಂಘಗಳು ಹುಟ್ಟಿಕೊಳ್ಳಲಿ ಆದರೆ ಸಂಘರ್ಷಗಳು ಹುಟ್ಟಿಕೊಳ್ಳುವುದು ಬೇಡ.
ಸಹಕಾರ ಸಂಘಗಳು ಸಹಕಾರ ಧರ್ಮ ಮತ್ತು ತತ್ವ-ಸಿದ್ಧಾಂತಗಳ ತಳಹದಿಯ ಮೇಲೆ ನಡೆಯಬೇಕು. ಅಂದಾಗ ಸಮಾಜದ ಏಳಿಗೆ ಸಾಧ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ಬೆಟ್ಟದ ರುದ್ರಪಶುಪತೇಶ್ವರ ಸ್ವಾಮೀಜಿ, ತಾಲೂಕ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ, ಮಲ್ಲಣ್ಣ ಮಡ್ಡಿ, ಸಂಗಣ್ಣ ಮೋಟಗಿ, ಶಿವಶರಣಪ್ಪ ಕಾಮಾ, ಶರಣಯ್ಯಸ್ವಾಮಿ ಹಿರೇಮಠ, ಚೆನ್ನಬಸ್ಸಯ್ಯ ಸ್ವಾಮಿ, ವೀರಯ್ಯ ಸ್ವಾಮಿ ವಸ್ತ್ರದ, ಡಾ.ಬಸವರಾಜ ಗಣಾಚಾರಿ, ಕಾಂತೀಲಾಲ್ ಜೈನ್, ಸೋಮಣ್ಣ ದೇವದುರ್ಗ, ಭೀಮರಾಯ ಮಮದಾಪುರ. ಸುರೇಶ ಜೆಡೆಪ್ಪಮಠ ಇನ್ನಿತರರು ಇದ್ದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರಣಬಸವ ಬಿ.ಗದ್ದುಗೆ ವಹಿಸಿದ್ದರು. ಅಮರೇಶ ಹಿರೇಮಠ ನಿರೂಪಿಸಿ, ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.