ರುದ್ರಾಕ್ಷಿ- ಸಾಲಿಗ್ರಾಮಗಳ ಪ್ರದರ್ಶನ
ಗುಲ್ಬರ್ಗ: ನಗರದ ಕೋಟ್ ರಸ್ತೆ ಗುಡ್ಲಕ್ ಹೋಟೆಲ್ನಲ್ಲಿ ನೇಪಾಲ್ ದಿವ್ಯ ರುದ್ರಾಕ್ಷಿ ಎಂಪೋರಿಯಂ ಹೈದ್ರಾಬಾದ್ ಇವರಿಂದ ಸರ್ವ ಜಗದಕ್ಷುರುದ್ರಾಕ್ಷಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಂಸ್ಥೆಯ ಒಡೆಯ ಬಾಲರಾಜ ಮಾತನಾಡಿ, ಷಣ್ಮುಖ ರುದ್ರಾಕ್ಷಿ ರಕ್ತ ಹತೋಟಿ ತರುತ್ತದೆ. ಹೃದಯ ರೋಗವು ಕೂಡ ಸರಿಯಾಗಿ ಕೆಲವು ಮಾಡುತ್ತದೆ. ಆದರೆ ರುದ್ರಾಕ್ಷಿಗಳು ಅಸಲಿ ಇದ್ದರೆ ಮಾತ್ರ ಪರಿಣಾಮ ಬೀರುತ್ತದೆ. ಭಾರದ ದೇಶದಲ್ಲಿ ರುದ್ರಾಕ್ಷಿಧಾರಣೆ, ಶರಣರು, ಸಂತರು ಸಾಧು ಸತ್ಪುರುಷರು ಮುನಿಗಳು ಹೆಚ್ಚಿನ ಮಹತ್ವ ಕೊಟ್ಟಿದ್ದರು. ದುಷ್ಟಶಕ್ತಿಯನ್ನು ಹೊರಹಾಕಲು ರುದ್ರಾಕ್ಷಿ ಧಾರಣೆಯಿಂದ ಮಾತ್ರ ಸಾಧ್ಯ. ವಿಶೇಷವಾಗಿ ಈ ಪ್ರದರ್ಶನದಲ್ಲಿ ಜನರಿಗೆ ರುದ್ರಾಕ್ಷಿ ಬಗ್ಗೆ ನಂಬಿಕೆ ಹುಟ್ಟಿಸೋ ನಕಲಿ, ಅಸಲಿ ಬಗ್ಗೆ ತಿಳಿವಳಿಕೆ ಮೂಡಿಸುವಾಗಿದೆ ಎಂದರು.
ಏಕಮುಖ ರುದ್ರಾಕ್ಷಿ, ಚತುದರ್ಶ, ಗೌರಿಶಂಕರ, ಗಣೇಶ ರುದ್ರಾಕ್ಷಿ, ವಿಷ್ಣುಚಕ್ರ, ಸಾಲಿಗ್ರಾಮ, ಲಕ್ಷ್ಮಿನರಸಿಂಹ ಸಾಲಿಗ್ರಾಮ, ಶಿವಲಿಂಗ ಸಾಲಿಗ್ರಾಮ, ಗಣೇಶ ಸಾಲಿಗ್ರಾಮ, ಸ್ಪಟಿಕೆ ಮಾಲಾ, ನವರತ್ನ ಮಾಲಾ, ಶ್ರೀಯಂತ್ರ ಮತ್ತು ರುದ್ರಾಕ್ಷಿ ಜಪಮಾಲಾಗಳಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.