ವಿವಿಧ ಸ್ಪರ್ಧೆ: ವಿಜೇತ ವಿದ್ಯಾರ್ಥಿಗಳು
ಗುಲ್ಬರ್ಗ: ಎಕ್ಸೆಲ್ ಇಂಡಿಯಾ ಫೌಂಡೇಷನ್ ಆಯೋಜಿಸಿದ ಅಂತರ್ ಶಾಲೆಯ ಸೃಜನಶೀಲತಾ ಚಿತ್ರಕಲಾ ಸ್ಪರ್ಧೆ ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಗಳಲ್ಲಿ ಶರಣಬಸವೇಶ್ವರ ವಸತಿ ಶಾಲೆ ಹಾಗೂ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರತಿಭೆ ಮೆರೆಯುವ ಮೂಲಕ ಪ್ರಥಮ ಪ್ರಶಸ್ತಿ ಸ್ಟಡಿ ಟೇಬಲ್, ದ್ವಿತೀಯ ಪ್ರಶಸ್ತಿ ಟ್ರಾವೆಲ್ ಬ್ಯಾಗ್ ಹಾಗೂ ತೃತೀಯ ಪ್ರಶಸ್ತಿ ಸ್ಕೂಲ್ ಟ್ರೋಲಿ ಬ್ಯಾಗ್ ಪಡೆದಿದ್ದಾರೆಂದು ಶಾಲೆಯ ಪ್ರಾಚಾರ್ಯ ತಿಳಿಸಿದ್ದಾರೆ.
ಚಿತ್ರಕಲಾ ವಿಭಾಗದಲ್ಲಿ ಗ್ರೂಪ್ 1ರ ಅಪ್ಪ ಪಬ್ಲಿಕ್ ಶಾಲೆಯ ಶೃತಿ ಎಸ್.ಜಿ ಪ್ರಥಮ, ಎಸ್ಬಿಆರ್ ಶಾಲೆಯ ಮಾಯಾ ಆರ್ಎನ್ ತೃತೀಯ, ಗ್ರೂಪ್ 2ರಲ್ಲಿ ಅಪ್ಪ ಪಬ್ಲಿಕ್ ಶಾಲೆಯ ಭವಾನಿ ಜೆ.ಪಿ ದ್ವಿತೀಯ ಹಾಗೂ ಗ್ರೂಪ್ 3ರಲ್ಲಿ ಅಪ್ಪ ಪಬ್ಲಿಕ್ ಶಾಲೆಯ ಶರಣ ಬಿ.ಕೆ ಪ್ರಥಮ, ಎಸ್ಬಿಆರ್ ಶಾಲೆಯ ರಾಜೇಶ್ವರಿ ಜಿ.ಸಿ ಪ್ರಥಮ, ಎಸ್ಬಿಆರ್ ಶಾಲೆಯ ಎಸ್. ಅಕ್ಷಯ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾಮಾನ್ಯ ಜ್ಞಾನ ವಿಭಾಗದಲ್ಲಿ ಗ್ರೂಪ್ 1ರಲ್ಲಿ ಅಪ್ಪ ಪಬ್ಲಿಕ್ ಶಾಲೆಯ ಸೈಯದ್ ಜೇನ್ ತೃತೀಯ, ಗ್ರೂಪ್ 2ರಲ್ಲಿ ಅಪ್ಪ ಪಬ್ಲಿಕ್ ಶಾಲೆಯ ತುಷಾರ ತೃತೀಯ, ಗ್ರೂಪ್ 3ರಲ್ಲಿ ಅಪ್ಪ ಪಬ್ಲಿಕ್ ಶಾಲೆಯ ಅಮೂಲ ಪ್ರಥಮ, ಗ್ರೂಪ್ 4ರಲ್ಲಿ ಎಸ್ಬಿಆರ್ ಶಾಲೆಯ ಅಮೋಘ ಪ್ರಥಮ, ಗ್ರೂಪ್ 5ರಲ್ಲಿ ಗಿರೀಶ್ ಪ್ರಥಮ ಹಾಗೂ ಮೇಘಾ ತೃತೀಯ ಸ್ಥಾನ ಪಡೆದಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಹಾಗೂ ಪ್ರಾಚಾರ್ಯರು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.