ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಿರೀಟ, ಗಾಳಿಪಟ ಜಯದ ಸಂಕೇತ...

Lingaraj Badiger
Updated On : 12 Mar 2013, 10:34 am

ಗುಲ್ಬರ್ಗ: 2007 ರ ಚುನಾವಣೆಗಿಂತ ಈ ಬಾರಿಯ ಪಾಲಿಕೆ ಕಣದಲ್ಲಿ ಮತದಾರರು 6 ಮಂದಿ ಪಕ್ಷೇತರರಿಗೆ ಮಣೆ ಹಾಕಿದ್ದು ವಿಶೇಷ. ಅದರಲ್ಲೂ ಗೆದ್ದಿರುವ ಪಕ್ಷೇತರರಲ್ಲಿ ಬಹಳ ಮಂದಿ ಗಾಳಿಪಟ ಚಿಹ್ನೆಯೊಂದಿಗೆ ಕಣದಲ್ಲಿದ್ದದ್ದು ಗಮನಾರ್ಹ. ಜೊತೆಗೇ ಕಿರೀಟ, ಆಟೋರಿಕ್ಷಾಗಳೂ ಕಂಡು ಬಂದವು.ವಾರ್ಡ್ 16ರ ಪಕ್ಷೇತರ ಮಹ್ಮದ್ ನಿಜಾಮುದ್ದೀನ್ ಗೋಲಾ ಕಿರೀಟದೊಂದಿಗೆ ಗೆಲುವಿನ ಕಿರೀಟ ಧರಿಸಿದರೆ, ವಾರ್ಡ್ 20ರ ಅಲಿಮುದ್ದೀನ್ ಪಟೇಲ್, 26ರ ಅಖಿಲಾ ಬೇಗಂ, 37ರ ಐಶಾ ಫಿರಮೇಶ ರಫಿಯುದ್ದೀನ್ ಇವರೆಲ್ಲರೂ ಗಾಳಿಪಟ ಚಿಹ್ನೆಯೊಂದಿಗೆ ಕಣದಲ್ಲಿದ್ದರು. ಇವರಿಗೆ ಗಾಳಿಪಟದ ಬೆನ್ನೇರಿದಂತೆ ಗೆಲುವು ದಕ್ಕಿದ್ದು ಈ ಬಾರಿಯ ವಿಶೇಷವಾಯ್ತು.ಇನ್ನು ವಾರ್ಡ್ 50ರ ಪಕ್ಷೇತರ ಸಿದ್ದಾರ್ಥ ಗುರುಶಾಂತ ಪಟ್ಟೇದಾರ್, ವಾರ್ಡ್ 52ರ ಪಕ್ಷೇತರ ಅಭ್ಯರ್ಥಿ ಶಬಾನಾ ಬೇಗಂ ಇವರಿಬ್ಬರದ್ದೂ ಆಟೋರಿಕ್ಷಾ ಚುನಾವಣೆ ಮತದಾನದ ಸಂಕೇತವಾಗಿತ್ತು. ಇವರಿಬ್ಬರೂ ಗೆಲವನ್ನು ದಕ್ಕಿಸಿಕೊಂಡಿದ್ದಾರೆ.
ಪ್ರಭುಲಿಂಗ ಹಾದಿಮನಿ ದಾಖಲೆಯ ಗೆಲುವಿನ ಹಾದಿ: ವಾರ್ಡ್ 23 ರಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಪ್ರಭುಲಿಂಗ ಹಾದಿಮನಿ 4, 247 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗೈನ ಪ್ರಭುಲಿಂಗ ಗೊಬ್ಬೂರ್ (807) ಇವರನ್ನು 3, 440 ಮತಗಳ ಅಂತರದಿಂದ ಪರಾಭವಗೊಳಿಸಿದರು. ಈ ಪಾಲಿಕೆಯ 55 ವಾರ್ಡ್‌ಗಳಲ್ಲಿಯೇ ಇವರ ಗೆಲವಿನ ಅಂತರ ಅತಿಹೆಚ್ಚು ಅಂತರವಾಗಿ ದಾಖಲೆಯಾಗಿದೆ. ಇವರ ನಂತರ ವಾರ್ಡ್ 5ರಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಸೈಯ್ಯದ್ ಅಹ್ಮದ್ ಅವರೂ ಸಹ 2,063 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಇವರದ್ದೂ ಅಪರೂಪದ ಮತಗಳ ಅಂತರವೆಂದೇ ಹೇಳಲಾಗುತ್ತಿದೆ.
ಭೀಮರೆಡ್ಡಿ ಕುರಕುಂದಿ ಫರ್ಸ್ಟ್ ರಿಸಲ್ಟ್: ಗುಲ್ಬರ್ಗ ಮಹಾನಗರ ಪಾಲಿಕೆಗೆ ಸೋಮವಾರ ಬೆ. 8 ರಿಂದ ಶುರುವಾದ ಮತಗಳ ಎಣಿಕೆಯಲ್ಲಿ ಮೊಟ್ಟ ಮೊದಲಿಗೆ ಪ್ರಕಟಗೊಂಡ ಫಲಿತಾಂಶ ಪುನರಾಯ್ಕೆ ಬಯಸಿದ್ದ ಕಾಂಗ್ರೆಸ್ ಸದಸ್ಯ ಭೀಮರೆಡ್ಡಿ ಕುರಕುಂದಿ ಅವರದ್ದು. ಎಣಿಕೆ ಶುರುವಾಗಿ 17 ನಿಮಿಷಗಳಲ್ಲೇ ಭೀಮರೆಡ್ಡಿ ವಿಜಯನಗೆ ಬೀರಿದ್ದು ಘೋಷಣೆಯಾದಾಗ ಕಾಂಗ್ರೆಸ್ ನಾಯಕರು, ಪಾಲಿಕೆ ಸದಸ್ಯರೆಲ್ಲರೂ ಕೈ ಶುಭಾರಂಭವಾಯ್ತು ಎಂದು ಸಂಭ್ರಮಿಸಿದರು. ಕಾಕತಾಳೀಯವೆಂಬಂತೆ ಕೊನೆಯ ಫಲಿತಾಂಶ ಪ್ರಕಟವಾದದ್ದು 11 ಗಂಟೆಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement