ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಜೆಪಿ ಉತ್ತಮ ಫಲಿತಾಂಶ: ಮಟ್ಟಣ್ಣವರ್

Lingaraj Badiger
Updated On : 12 Mar 2013, 10:41 am

ಯಾದಗಿರಿ: ಗಡಿ ಭಾಗದ ಗುರಮಠಕಲ್ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಲಭ್ಯವಾಗಿದೆ ಎಂದು ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ್ ಮಟ್ಟಣ್ಣವರ್ ಹರ್ಷ ವ್ಯಕ್ತಪಡಿಸಿದರು.
ಸೋಮವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರಮಠಕಲ್ ಪಪಂನಲ್ಲಿ ಗೆಲವು ಸಾಧಿಸಿದ ಬಿಜೆಪಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು. ಕಳೆದ ಹಲವು ತಿಂಗಳಿನಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಶ್ರಮಿಸಿದ್ದಾರೆ.
 ಮಾತ್ರವಲ್ಲ ಇಂದಿನ ಗೆಲವು ಇಡೀ ಪಕ್ಷಕ್ಕೆ ಸಿಕ್ಕ ಜಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ವೀರನಗೌಡ ಮಲ್ಲಾಬಾದಿ ಮಾತನಾಡಿ, ಗುರಮಠಕಲ್ ಪಪಂಗೆ ಬಿಜೆಪಿಯ 4 ಜನ ಸದಸ್ಯರು ಆಯ್ಕೆಯಾಗಿದ್ದು ಸಂತಸದ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಪಕ್ಷ ಇನ್ನೂ ಹೆಚ್ಚಿನ ಸ್ಥಾನ ಪಡೆದುಕೊಳ್ಳಲು ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ತೊಗರಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ಗಡ್ಡಿಮನಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವಿಂದ್ರನಾಥ ನಾದ್, ತಾಲೂಕಾಧ್ಯಕ್ಷ ಸಿದ್ದಾರಡ್ಡಿ ಬಲಕಲ, ನಗರಾಧ್ಯಕ್ಷ ಲಿಂಗಪ್ಪ ಹತ್ತಮನಿ, ದೇವದಾಸು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement