ಸುಸೂತ್ರವಾಗಿ ನಡೆದ ಪಿಯುಸಿ ಪರೀಕ್ಷೆ
ಯಾದಗಿರಿ: ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರ ಆರಂಭವಾಗಿದ್ದು, ಮೊದಲ ದಿನ ಇತಿಹಾಸ ಹಾಗೂ ಕಂಪ್ಯೂಟರ್ ವಿಜ್ಞಾನ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಪ್ರಥಮ ದಿನವಾದ ಬುಧವಾರ ಜಿಲ್ಲೆಯ 4103 ವಿದ್ಯಾರ್ಥಿಗಳು ಇತಿಹಾಸ ಪರೀಕ್ಷೆ ಬರೆದಿದ್ದಾರೆ. 423 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆದಿಲ್ಲ. ಯಾವುದೇ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿಲ್ಲ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಂಕ್ರಪ್ಪ ಗುಳಬಾಳ ತಿಳಿಸಿದ್ದಾರೆ.