ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉದ್ಯೋಗ ನೀಡಲು ಆಗ್ರಹ

Lingaraj Badiger
Updated On : 15 Mar 2013, 10:46 am

ಕ.ಪ್ರ. ವಾರ್ತೆ, ಯಾದಗಿರಿ, ಮಾ.14
ಶಹಾಪುರ ತಾಲೂಕಿನ ತುಮಕೂರ ಹತ್ತಿರದ ಕೊರಗ್ರೀನ್ ಸಕ್ಕರೆ ಕಾರ್ಖಾನೆಗೆ ಅನೇಕ ರೈತರು ತಮ್ಮ ಹೊಲಗಳನ್ನು ನೀಡಿದ್ದು, ನಿಯಮದ ಪ್ರಕಾರ ರೈತರ ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಬೇಕಾಗಿತ್ತು. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಇದುವರೆಗೆ ಉದ್ಯೋಗ ಕೊಟ್ಟಿಲ್ಲ.
 ನಂಜುಂಡಪ್ಪ ವರದಿ ಪ್ರಕಾರ ಶೇ. 75ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಿಲ್ಲ. ಇದರಿಂದಾಗಿ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಆರೋಪಿಸಿದ್ದಾರೆ.
ಜೀವ ಭಯ: ಒಂದಿಬ್ಬರು ಸ್ಥಳೀಯರಿಗೆ ಉದ್ಯೋಗವನ್ನು ನೀಡಲಾಗಿದೆ. ಅದೂ ಸಹ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪನಿಯಲ್ಲಿ ಕಾರ್ಮಿಕ ವರ್ಗದವರಿಗೆ ಯಾವುದೇ ಭದ್ರತೆಯಿಲ್ಲ. ಜೀವ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಇದೆಲ್ಲ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದೆ. ಅವರು ಸಹ ಕಂಪನಿಯ ದುರಾಡಳಿತದಲ್ಲಿ ಭಾಗಿಯಾಗಿದ್ದಾರೆಂದು ದೂರಿದ್ದಾರೆ.
  ಈ ಹಿಂದೆ ಕಾರ್ಖಾನೆಯು ಸ್ಥಳೀಯರಿಗೆ ನೌಕರಿ ನೀಡುತ್ತಿಲ್ಲ ಎಂದು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಶಹಾಪುರ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದರು. ಅವರಿಗೆ ಹತ್ತು ದಿನಗಳಲ್ಲಿ ಕಾರ್ಖಾನೆಯಲ್ಲಿ ಎಷ್ಟು ಜನ ಸ್ಥಳೀಯರು ಉದ್ಯೋಗ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕಾರ್ಖಾನೆಯವರು ಕೊಡುವುದಾಗಿ ಭರವಸೆ ನೀಡಿದ್ದರು. ಮುಂದೆ ಸ್ಥಳೀಯರಿಗೆ ಮಾತ್ರ ಉದ್ಯೋಗ  ಕೊಡುವುದಾಗಿಯೂ ತಿಳಿಸಿದ್ದರು. ಆದರೆ ಆ ಭರವಸೆ ಇಲ್ಲಿವರೆಗೂ ಈಡೇರಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಕಂಪನಿಯವರು ಈ ಹಿಂದೆ ತಹಸೀಲ್ದಾರರ ಮುಂದೆ ಒಪ್ಪಿಕೊಂಡಂತೆ ವಿವರವಾದ ಉದ್ಯೋಗ ಮಾಹಿತಿಯನ್ನು ಒಂದು ವಾರದಲ್ಲಿ ಕೊಡಬೇಕು. ಇಲ್ಲದಿದ್ದರೆ, ಕಾರ್ಖಾನೆಯ ಎದರು ಕರವೇ ಕಾರ್ಯಕರ್ತರು ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಜಂಟಿಯಾಗಿ  ಕಾರ್ಖಾನೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಅಬ್ದಲ್ ಚಿಗಾನೂರ, ಅಬ್ದುಲ್ ಖತಾಲಿ, ಪ್ರಭು ಬೆನಕನಳ್ಳಿ, ರಂಗಯ್ಯ ಮುಸ್ತಾಜೀರ ತುಮಕೂರ, ಭೀಮು ಕೋಡಾಲ,ಸುರೇಶ  ಕೋಡಾಲ, ಹಣಮಂತ  ತೇಕಾರಳ, ಅಯ್ಯಪ್ಪ ಹಾಲಗೇರಾ, ಅಬ್ದುಲ್ ಅರ್ಜುಣಗಿ, ಚೆನ್ನಮ್ಮ ಪಾಟೀಲ್ ಬಿಳ್ಹಾರ,  ಅಜ್ಮೀರ್, ರಫಿ, ಸಿದ್ಧು, ವಿಜಯ, ರಡ್ಡಿ, ವಾಸು, ಶಂಭು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement