ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ
ಯಾದಗಿರಿ: ಟೋಕರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ವಡಗೇರಾ ತಾಲೂಕಿನ ಕೋಲಿ ಸಮಾಜದ ನೂತನ ತಾಲೂಕು ಘಟಕ ಪದಾಧಿಕಾರಿಗಳನ್ನು ಸಮಾಜದ ರಾಜ್ಯಾಧ್ಯಕ್ಷ ವಿಠ್ಠಲ ಹೇರೂರ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಭೀಮರಾವ ಬಾವೂರ, ಸಂಘಟನಾ ಕಾರ್ಯದರ್ಶಿಯಾಗಿ ಯಂಕಪ್ಪಪಿಲ್ಲೆ, ಸೈದಪ್ಪ ಶಿವಪುರ, ಮಲ್ಲು ಹುಂಡೆಕಲ್, ಖಜಾಂಚಿಯಾಗಿ ಮರೆಪ್ಪ ಎಸ್. ಗುರುಸಿಣಿಗಿ, ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ನಿಂಗಪ್ಪ ಮಳ್ಳಳ್ಳಿ, ಸಿದ್ದಪ್ಪ ನಾಲ್ವಡಗಿ, ಬಸಲಿಂಗಪ್ಪಕೊಂಕಲ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಠ್ಠಲ ಹೇರೂರ್ ಮಾತನಾಡಿ, ನೂತನ ಅಧ್ಯಕ್ಷರು ಮುದ್ನಾಳ ಮಾರ್ಗದರ್ಶನದಲ್ಲಿ ಸಮಾಜವನ್ನು ಸಂಘಟನೆ ಮಾಡಬೇಕೆಂದರು.
--