ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಡಗೇರಾ ಸಮಗ್ರ ಅಭಿವೃದ್ಧಿಗೆ ಕ್ರಮ

Lingaraj Badiger
Updated On : 15 Mar 2013, 10:46 am

ಯಾದಗಿರಿ: ರಾಜ್ಯ ಸರ್ಕಾರ ವಡಗೇರಾವನ್ನು ನೂತನ ತಾಲೂಕು ಎಂದು ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಇಲ್ಲಿ ಬಸ್ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ಈ ಭಾಗದ ಜನರ ಸೌಭಾಗ್ಯ. ಮುಂದಿನ ದಿನಗಳಲ್ಲಿ ಹೊಸ ತಾಲೂಕು ಕೇಂದ್ರವಾದ ವಡಗೇರಾ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿದರು.
  ಶಹಾಪುರ ತಾಲೂಕಿನ ವಡಗೇರಾದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.
ವಡಗೇರಾ ಭಾಗದ ಅಭಿವೃದ್ಧಿಗೆ ಬದ್ಧ: ಪ್ರಸ್ತುತ ಈ ನಿಲ್ದಾಣಕ್ಕೆ ಪ್ರತಿ ದಿನ 24 ಸಾರಿಗೆ ವಾಹನಗಳ ಆಗಮನ ಮತ್ತು ನಿರ್ಗಮನವಾಗುತ್ತಿದೆ. ಅಲ್ಲದೆ, ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳಿಗೆ ಸುಮಾರು 20 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ದೂರದ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ವಡಗೇರಾ ಭಾಗದ ಅಭಿವೃದ್ಧಿಗೆ ತಾವು ಎಂದಿಗೂ ಬದ್ಧ ಎಂದು ಹೇಳಿದರು.
  ಸಮಾರಂಭದ ಅಧ್ಯಕ್ಷತೆಯನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಕಲ್ಲೂರ ಮಾತನಾಡಿದರು. ಸಾರಿಗೆ ಸಂಸ್ಥೆ ಗುಲ್ಬರ್ಗದ ಮುಖ್ಯ ಅಭಿಯಂತರ ವಿ.ಜಿ. ಕುಲ್ಕರ್ಣಿ, ಜಿಪಂ ಅಧ್ಯಕ್ಷೆ ಮರೆಮ್ಮ ಶ್ಯಾಣೆನೋರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವಿಂದ್ರನಾಥ ನಾದ, ಶಹಾಪುರ ತಾಪಂ ಅಧ್ಯಕ್ಷೆ ಶಿವಬಾಯಿ ಶಿವಮಹಾಂತಪ್ಪ, ಜಿಪಂ ಸದಸ್ಯೆ ಪಾರ್ವತಮ್ಮ ಕಾಡಂನೋರ, ಗ್ರಾಪಂ ಅಧ್ಯಕ್ಷೆ ಕಾಶಮ್ಮ ಪಿಡ್ಡೇಗೌಡರ, ಮಲ್ಲಣ್ಣ ಇಟಗಿ, ಮರೆಪ್ಪ ಬಿಳ್ಹಾರ, ಬಸವರಾಜಪ್ಪ ಸಾಹು ಕರಣಗಿ, ಶಂಕ್ರಯ್ಯಸ್ವಾಮಿ ಹಿರೇಮಠ, ಜಗನ್ನಾಥರಡ್ಡಿ, ದೇವಿಂದ್ರಪ್ಪ ಕಡೆಚೂರ, ಅಂಬಾಜಿ, ಶಂಕ್ರಪ್ಪ ಇದ್ದರು.
ಭೂ ದಾನ ಮಾಡಿದವರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ಒಂದು ಎಕರೆ ಭೂಮಿಯನ್ನು ದಾನ ಮಾಡಿದ ಬಸವರಾಜಪ್ಪ ಮಾಲೀಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ವಿಭಾಗಿಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ಸ್ವಾಗತಿಸಿದರು. ಘಟಕದ ವ್ಯವಸ್ಥಾಪಕ ಮಹೀಪಾಲ ಬೇಗಾರ ನಿರೂಪಿಸಿದರು. ಮಂಜುನಾಥ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement