ನಾಲವಾರ ಕುಲಕುಂದಿ ರಸ್ತೆ ಕಾಮಗಾರಿಗೆ ಶಾಸಕ ಚಾಲನೆ
ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮದ ಕೋರಿಸಿದ್ದೇಶ್ವರ ಸಂಸ್ಥಾನ ಮಠದಿಂದ ಕೊಲಕುಂದ ಗ್ರಾಮದ ಕ್ರಾಸ್‌ವರೆಗೆ 1.23 ಕೋಟಿ ವೆಚ್ಚದ ಡಾಂಬರ್ ರಸ್ತೆಗೆ ಡಾ. ಸಿದ್ದತೋಟೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಸಕ ವಾಲ್ಮೀಕಿ ನಾಯಕ ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು, ಕರ್ನಾಟಕ ಸರ್ಕಾರದಿಂದ 2ನೇ ಹಂತದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಒಟ್ಟು 30 ಕಿ.ಮೀ. ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ.
ಇದರಲ್ಲಿ ನಾಲವಾರ ಮಠದಿಂದ ಕೊಲಕುಂದ ಕ್ರಾಸ್‌ವರೆಗೆ 2.92 ಕಿ.ಮೀ. ರಸ್ತೆಯನ್ನು 1.23 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ನಾಲವಾರ ಗ್ರಾಮದ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಕುಲಕುಂದ ಗ್ರಾಮದ ಭೀಮಾ ನದಿಯಿಂದ ನಾಲವಾರ, ಕುಂಬಾರಹಳ್ಳಿ ಗ್ರಾಮದವರೆಗೆ ಶುದ್ಧ ನೀರು ಪೂರೈಸಲು 5 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಇಇ ಕಾಳೆ, ಜೆಇ ಖಾದ್ರಿ, ಸಂಜಯ, ತಾಪಂ ಇಓ ಸುರೇಶ ಬಿರಾದಾರ, ಬಿಜೆಪಿ ಮುಖಂಡರಾದ ಭೀಮರಾಯ ಮಲ್ಕಪ್ಪನಹಳ್ಳಿ, ಶಿವನಗೌಡ ಪಾಟೀಲ್ ಕನಗನಳ್ಳಿ, ಭೀಮರಾಯ ಬನ್ನಟ್ಟಿ, ಚನ್ನಪ್ಪಗೌಡ ದೊಡ್ಡಮನಿ, ಮಹೇಶಗೌಡ ಸೂಗೂರ, ಮಹಿಪಾಲರೆಡ್ಡಿ ಸೂಗೂರ, ಶರಣಗೌಡ ಹಳಿಮನಿ, ಶಿವನಗೌಡ ನಾಲವಾರ, ಹಣಮಂತ ಹೆಡಗಿಮದ್ರಿ, ಗುತ್ತಿಗೆದಾರ ವಿನೋದ ಪಾಟೀಲ್ ಇತರರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.