ಶಿವ ಎಂದರೆ ಕರ್ತವ್ಯದ ಸಂಕೇತ: ಬಿಕೆ ಪ್ರೇಮ
ಸುರಪುರ: ಶಿವ ಎಂದರೆ ಶರೀರದ ಹೆಸರಲ್ಲ. ಬದಲಾಗಿ ಕರ್ತವ್ಯದ ಸಂಕೇತವಾಗಿ ಶಿವ ಎಂದು ಕರೆಯಲಾಗುತ್ತದೆ. ಲೋಕದಲ್ಲಿ ಅಧರ್ಮ, ಅಂಧಕಾರ ಹೆಚ್ಚಾದಾಗ ಶಿವನು ಕಲಿಯುಗ ಎಂಬ ರಾತ್ರಿಯಲ್ಲಿ ಆಗಮಿಸಿ ನಮ್ಮನ್ನು ಸತ್ಯಯುಗ ಎಂಬ ಬೆಳಕಿನಡೆಗೆ ಕರೆದೊಯ್ಯುತ್ತಾನೆ. ಇದನ್ನೇ ಶಿವರಾತ್ರಿ ಎಂದು ಆಚರಿಸುವ ರೂಢಿ ಇದೆ ಎಂದು ರಾಜಯೋಗಿ ಬಿ.ಕೆ. ಪ್ರೇಮ ತಿಳಿಸಿದರು.
ಇಲ್ಲಿನ ದೇವತೀರ್ಥದಲ್ಲಿ ಮಹಾಶಿವರಾತ್ರಿ ನಿಮಿತ್ತ ಏರ್ಪಡಿಸಿದ್ದ ಶಿವ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸುಖ ಪಡೆಯಲು ಮನುಷ್ಯ ನೂರೆಂಟು ಪ್ರಯತ್ನ ಮಾಡುತ್ತಿದ್ದಾನೆ. ಶಾಂತಿಯ ಬದುಕಿಗಾಗಿ ಹಲವಾರು ಮಠ ಮಾನ್ಯಗಳಿಗೆ ಎಡತಾಕುತ್ತಿದ್ದಾನೆ. ಧ್ಯಾನ ಮತ್ತು ಯೋಗದಿಂದ ಮಾತ್ರ ಶಾಂತಿ ಲಭಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಿತ್ಯವೂ ಕನಿಷ್ಠ ಸಮಯವನ್ನು ಧ್ಯಾನ ಮತ್ತು ಯೋಗಕ್ಕಾಗಿ ಮೀಸಲಿಡಿ ಎಂದು ಕರೆ ನೀಡಿದರು. ಆಯುಷ್ ವೈದ್ಯಾಧಿಕಾರಿ ಸ್ಮಿತಾ ಅಂಬುರೆ ಮಾತನಾಡಿ, ಇಂದು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ರೋಗಗಳು ನಮ್ಮನ್ನು ಆವರಿಸುತ್ತವೆ. ಕೆಲ ರೋಗಗಳಿಗೆ ಧ್ಯಾನವನ್ನು ಚಿಕಿತ್ಸಾ ವಿಧಾನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಧ್ಯಾನ ಮತ್ತು ಯೋಗ ಒತ್ತಡ ಮುಕ್ತ ಬದುಕನ್ನು ನೀಡಬಲ್ಲದು ಎಂದು ಹೇಳಿದರು. ರಾಜಯೋಗಿನಿ ಬಿ.ಕೆ. ವಿಜಯಕ್ಕ, ರಾಜಯೋಗಿ ಬಿಕೆ ಶಿವಲೀಲಾ, ಪಿಐ ರಾಜಕುಮಾರ ವಾಜಂತ್ರಿ ವೇದಿಕೆಯಲ್ಲಿದ್ದರು. ದೇವತೀರ್ಥದ ಸಂಚಾಲಕಿ ಬಿಕೆ ರಾಗಿಣಿ ಸ್ವಾಗತಿಸಿದರು. ಬಿಕೆ ಸವಿತಾ ನಿರೂಪಿಸಿ ವಂದಿಸಿದರು. ರಾಜಣ್ಣ ಕಡಕೋಳ, ಮಾಣಿಕಪ್ರಭು ಲಾಹೋಟೆ, ಚನ್ನಬಸಪ್ಪ ಹೂಗಾರ, ಘನಶ್ಯಾಮ ತಿವಾರಿ, ಎ.ಕೃಷ್ಣ ಸುರಪುರ, ಹಣಮಂತ್ರಾಯ ಇತರರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.