ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಕೆಡಿಪಿ ಸಭೆ

Lingaraj Badiger
Updated On : 18 Mar 2013, 10:55 am

ಗುಲ್ಬರ್ಗ: ಜಿಲ್ಲಾ ಪಂಚಾಯಿತಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಹಾಗೂ ವಿಶೇಷ ಅಭಿವೃದ್ಧಿ ಯೋಜನೆ (ಎಸ್.ಡಿ.ಪಿ)ಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾ.18ರ ಬೆಳಗ್ಗೆ 11 ಗಂಟೆಗೆ ಜಿಪಂ ಹಳೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಪಲ್ಲವಿ ಆಕುರಾತಿ ತಿಳಿಸಿದ್ದಾರೆ.
ವಾಂತಿ, ಭೇದಿ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ವಾರ್ಡ್ 29ರ ಇಂದಿರಾ ನಗರ ಅಪ್ಪರ ಮಡ್ಡಿ ಪ್ರದೇಶದಲ್ಲಿ ಕಲುಷಿತ ನೀರು ಕುಡಿದು ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.  ಗುರುವಾರ ಸಂಜೆಯಿಂದ ವಾಂತಿ,  ಭೇದಿ ಕಾಣಿಸಿಕೊಂಡಿದ್ದು, ಸುಮಾರು 5 ಜನರಿಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನು ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವಾರ್ಡ್ ನಗರಸಭೆ ಸದಸ್ಯ ವೆಂಕಟೇಶ ದಂಡಗುಲಕರ್ ತಿಳಿಸಿದ್ದಾರೆ.
ಕಲುಷಿತ ನೀರು ಕಾರಣ: ಹಿಂದುಳಿದ ಅಪ್ಪರ ಮಡ್ಡಿ ಪ್ರದೇಶದಲ್ಲಿ ಏಕಾಏಕಿ ವಾಂತಿ  ಭೇದಿ ಕಾಣಿಸಿಕೊಳ್ಳಲು ಕಲುಷಿತ ನೀರು, ನಗರದಲ್ಲಿ ನಳದ ಪೈಪ್‌ಗಳು ಅಲ್ಲಲ್ಲಿ ಒಡೆದು, ಕೊಳಚೆ ನೀರು ಪೈಪ್‌ನಲ್ಲಿ ಹರಿದು ಈ ಸಮಸ್ಯೆ ಉಂಟಾಗಲು ಕಾರಣ ಎನ್ನಲಾಗಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸ್ವಾಗತಕ್ಕೆ ಸಿದ್ಧತೆ
ಗುಲ್ಬರ್ಗ/ಶಹಾಬಾದ್:  ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಮಾ. 18ರಂದು ಶಹಾಬಾದ ನಗರಕ್ಕೆ ಆಗಮಿಸುವ ಶರಣ ಸಂಸ್ಕೃತಿ ಮಹಾಯಾತ್ರೆಗೆ ಸ್ವಾಗತಕ್ಕೆ ಸಿದ್ಧತೆ ನಡೆದಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement