ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.17
ತಾಲೂಕಿನ ಭೀಮಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಹಾಗೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ವಿಷಯ ಕಠಿಣವಲ್ಲ, ನಿರಂತರ ಪ್ರಯತ್ನದಿಂದ ಸುಲಭ ಸಾಧ್ಯ ಎಂದರು.
ಶಾಲೆಯ ಸಿಬ್ಬಂದಿ ಹಣಮಂತರಾವ ಪಾಟೀಲ್ ಮಾತನಾಡಿ, ನಿಶ್ಚಿತವಾದ ಗುರಿ, ಸತತ ಪ್ರಯತ್ನ ಯಶಸ್ಸಿನ ಗುಟ್ಟು. ಪರೀಕ್ಷೆಯ ಬಗ್ಗೆ ಯಾವುದೇ ರೀತಿ ಭಯಪಡದೆ, ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದರು. ಯಾವುದೇ ವಿಷಯ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ತುಂಬಾ ಒಳ್ಳೆಯದು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯೊಂದಿಗೆ ತೇರ್ಗಡೆ ಹೊಂದಿ, ಜೀವನದಲ್ಲಿ ಉನ್ನತವಾದ ಗುರಿಯನ್ನು ಹೊಂದಬೇಕೆಂದು ಕರೆ ನೀಡಿದರು.
ಶೃತಿ ಬಾಗೇವಾಡಿ, ಮುಖ್ಯಗುರು ಮಲ್ಲಿಕಾರ್ಜುನ ಓಕಳಿ, ರಾಜಶೇಖರ ಮರಡಿ, ಮುಖ್ಯಗುರು ಎಚ್.ವೀರಭದ್ರಪ್ಪ ವಹಿಸಿ ಮಾತನಾಡಿದರು. ಬಸವರಾಜ ನಿಂಬರಗಿ, ಪಾರಮ್ಮ, ಪಾರ್ವತಿ, ರಾಮನಾಥ, ವೆಂಕಟೇಶ ಚಿಳ್ಳೆ, ಭೌರಮ್ಮ, ಬಸವರಾಜ ನಾಗೂರೆ ಮತ್ತಿತರರಿದ್ದರು.