ಬಿಜೆಪಿಯಿಂದ ರಸ್ತೆಗಳ ಸುಧಾರಣೆ: ವಾಲ್ಮೀಕಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಶಹಾಬಾದ್, ಮಾ.17
ಚಿತ್ತಾಪುರ ತಾಲೂಕಿನ ಕಟ್ಟಕಡೆಯ ಹಳ್ಳಿಯಾದ ಬನ್ನಟ್ಟಿ ಗ್ರಾಮದ ಅಭಿವೃದ್ಧಿಯನ್ನು ಕಳೆದ 60 ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಕೇವಲ ನಾಲ್ಕೂವರೆ ವರ್ಷದಲ್ಲಿ ಗ್ರಾಮಗಳ ಅಭಿವೃದ್ಧಿ, ರಸ್ತೆಗೆ ಸುಧಾರಣೆಗೆ ಪ್ರಾಧ್ಯಾನತೆ ನೀಡಿದೆ ಎಂದು ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ ಹೇಳಿದರು.
ಅವರು ಗ್ರಾಮದಿಂದ ಕೊಲ್ಲೂರು ಕ್ರಾಸ್‌ವರೆಗೆ 2.35 ಕೋಟಿ ವೆಚ್ಚದಲ್ಲಿ 6.13 ಕಿ.ಮೀ. ಡಾಂಬರ್ ರಸ್ತೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಸಿದ್ದಣ್ಣ ಕಲಶೆಟ್ಟಿ ಮಾತನಾಡಿದರು, ಎಇಇ ಕಾಳೆ, ಜಿಪಂ ಎಇಇ ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿರಾದಾರ, ಬಿಜೆಪಿ ಮುಖಂಡರಾದ ಚನ್ನಪ್ಪಗೌಡ ಮಾರಡಗಿ, ಶಿವನಗೌಡ ಕನಗನಳ್ಳಿ, ಭೀಮರಾಯ, ಸಾಬಣ್ಣ ಜಾಲಗಾರ, ಗೋಪಿಚಂದ, ಹಣಮಂತ, ನೆಹರು ಉಳಂಡಗೇರಾ, ಚಂದಪ್ಪ, ಕಿರಿಯ ಅಭಿಯಂತರಾದ ಸತ್ರೋದ್ದಿನ್, ಸಂಜೀವ, ಖಾದ್ರಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು. ವೆಂಕಟೇಶ ನಿರೂಪಿಸಿದರು.
ರಾಷ್ಟ್ರಗೀತೆ ಇಲ್ಲಿ ಪ್ರಾರ್ಥನಾ ಗೀತೆ: ನಾಲವಾರ ವಲಯದ ಬನ್ನಟ್ಟಿ ಗ್ರಾಮದಲ್ಲಿ ಶಾಸಕ ವಾಲ್ಮೀಕಿ ನಾಯಕ ಅವರು ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದಾಗ, ಕಾರ್ಯಕ್ರಮ ಆಯೋಜಕರು ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆಸಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೆ ಮುಂಚೆ ರಾಷ್ಟ್ರಗೀತೆಯನ್ನು ಪ್ರಾರ್ಥನಾ ಗೀತೆಯಾಗಿ ಹಾಡಿಸಿದರು. ಇದಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇಇಯವರು ಸಾಕ್ಷಿಯಾದರು.