ಮಹಿಳೆಗೆ ಗೌರವ ಸಿಗುತ್ತಿಲ್ಲ: ಡಾ. ಕತ್ನಳ್ಳಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಶಹಾಬಾದ್, ಮಾ.17
ವೇದಗಳ ಕಾಲದ ನಂತರ 12ನೇ ಶತಮಾನದಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನಮಾನವನ್ನು ಬಸವಾದಿ ಶರಣರು ಕೊಟ್ಟಿದ್ದರು. ಆದರೆ 21ನೇ ಶತಮಾನದಲ್ಲಿ ಮಹಿಳೆಗೆ ಗೌರವ ಸಿಗುತ್ತಿಲ್ಲ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ನೀಲಮ್ಮ ಕತ್ನಳ್ಳಿ ವಿಷಾದ ವ್ಯಕ್ತಪಡಿಸಿದರು.
ಅವರು ಗುರುವಾರ ನಗರದ ಕೂಡಲಸಂಗಮ ಶಿಕ್ಷಣ ಸಂಸ್ಥೆಯ ಶಾಲಾ, ಮಹಿಳಾ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರಗಳ 23ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾಡನಾಡಿ, ವೇದಗಳ ಕಾಲದಲ್ಲಿ ಮೈತ್ರೇಯಿ, ಗಾರ್ಗಿಯವರು ವೇದಗಳನ್ನು ಕಲಿತು ಬ್ರಹ್ಮವಾದಿನಿಯರಾಗಿದ್ದರು ಎಂದರು. ಮುಖ್ಯ ಅತಿಥಿಗಳಾದ ನಿವೃತ್ತ ಆಯುಕ್ತ ಎಲ್.ಎಸ್. ರಾಠೋಡ, ಉದ್ಯಮಿ ಹಣಮಂತರಾವ ಇಂಗಿನಶೆಟ್ಟಿ ಮಾತನಾಡಿದರು, ಅಣೆಪ್ಪ ಇಂಗಿನಶೆಟ್ಟಿ, ತಿಪ್ಪಣ್ಣ ಅಪಚಂದ, ಎನ್.ಸಿ. ವಾರದ, ಎಸ್.ಎಸ್. ತಾಡಪಳ್ಳಿ, ಬಿ.ಎ. ಬಿರಾದಾರ, ಮುಖ್ಯಗುರುಗಳಾದ ಅಪ್ಪಾಸಾಹೇಬ್ ಚೌಧರಿ, ಪೀರ್ ಪಾಶಾ ಇದ್ದರು. ಸಂಸ್ಥೆ ಅಧ್ಯಕ್ಷ ಆರ್.ಜೆ. ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ರವಿ ನರೋಣಿ, ಶಿವಲಿಂಗಪ್ಪ ಬುಳ್ಳಾ ನಿರೂಪಿಸಿದರು. ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ-ಕಾಲೇಜು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಗಿರಿಮಲ್ಲಪ್ಪ ವಳಸಂಗ ವಂದಿಸಿದರು.
ರಾಷ್ಟ್ರಗೀತೆ ಹಾಡಬಹುದು
ಪ್ರಾರ್ಥನಾ ಗೀತೆಯಾಗಿ ರಾಷ್ಟ್ರಗೀತೆಯನ್ನು ಹಾಡಿದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಶಾಸಕ ವಾಲ್ಮೀಕಿ ನಾಯಕ ಅವರು ರಾಷ್ಟ್ರಗೀತೆಯನ್ನು ಕಾರ್ಯಕ್ರಮಕ್ಕೆ ಮುನ್ನ ಪ್ರಾರ್ಥನೆಯಾಗಿ, ಕಾರ್ಯಕ್ರಮ ಮುಗಿದ ನಂತರವೂ ಹಾಡಬಹುದು ಎಂದು ರಾಷ್ಟ್ರಗೀತೆಯ ಬಗ್ಗೆ ತಮಗಿರುವ ಜ್ಞಾನವನ್ನು ವಿವರಿಸಿದರು.
'ಕಾರ್ಪ್' 108ನೇ ಸಂಸ್ಥಾಪನಾ ದಿನಾಚರಣೆ
ಗುಲ್ಬರ್ಗ ನಗರದ ಕಾರ್ಪೋರೇಷನ್ ಬ್ಯಾಂಕ್ ತನ್ನ 108ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಗ್ರಾಹಕರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಡಾ. ಮಧುಕರ ದೇಶಪಾಂಡೆ ಆರೋಗ್ಯ ತಪಾಸಣೆ ಮಾಡಿದರು. ಬ್ಯಾಂಕಿನ ಗ್ರಾಹಕ ಬಸವರಾಜ ಕೊನೇಕ್ ಅವರಿಗೆ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ ಲಭಿಸಿದ್ದಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಡಿಜಿಎಂ ಸುರೇಶ, ಮುಖ್ಯ ವ್ಯವಸ್ಥಾಪಕ ಗೋಂದಿ ವಿ.ಬಿ., ಎಸ್.ಎಂ. ಹರಾಳೆ, ವ್ಯವಸ್ಥಾಪಕ ರಾಮದಾಸ ಚವ್ಹಾಣ ಇದ್ದರು.
ಕಾರ್ಯಕ್ರಮದಲ್ಲಿ ಹಲವಾರು ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು. ಚಿಕಿತ್ಸೆಗೆ ಒಳಗಾದವರಿಗೆ ಸಲಹೆ ನೀಡಲಾಯಿತು.