ಮಹಿಳೆಯರು ಮಾನಸಿಕ ಸ್ಥೈರ್ಯ ಬೆಳಸಿಕೊಳ್ಳಿ
ಚಿತ್ತಾಪುರ: ಮಹಿಳೆಯರು ಹತಾಶೆಗೊಳ್ಳದೆ ದೌರ್ಜನ್ಯವನ್ನು ವಿರೋಧಿಸಲು ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕೆಂದು ತಹಸೀಲ್ದಾರ್ ಬಾಲರಾಜ ದೇವರಖದ್ರಾ ಹೇಳಿದರು.
ಜ್ಯೋತಿಸೇವಾ ಕೇಂದ್ರ ಹಮ್ಮಿಕೊಂಡ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣಿ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಭಾವನೆಯಿಂದ ಕಾಣುತ್ತೇವೆ. ಮಹಿಳೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಸಮಾಜದಲ್ಲಿ ಉತ್ತಮ ನಾರಿಯಾಗಿ ಬಾಳಬೇಕು.
ತಾನು ಅಬಲೆಯಲ್ಲ ಸಬಲೆಯೆಂದು ತಿಳಿದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.
ಫಾದರ್ ಜಾರ್ಜ್ ಲೋಬೋ, ಯೋಜನಾ ವ್ಯವಸ್ಥಾಪಕಿ ಲೂಸಿ ಪ್ರಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಚಾರಕಿ ಮೀನಾಕ್ಷಿ, ಆನಂದ ಮುಕ್ತೇದಾರ ಮಾತನಾಡಿದರು.
ವಿದ್ಯಾರಾಣಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ತೆರಿಜಿಯಾಮಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮಗಳ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಲಕ್ಷ್ಮಿ, ಭುವನೇಶ್ವರಿ, ಶೋಭಾ, ಸವಿತಾ ಅನಿಸಿಕೆ ವ್ಯಕ್ತಪಡಿಸಿದರು. ಈ ವೇಳೆ ಮಹಿಳೆಯರಿಂದ ದೇಶ ಭಕ್ತಿಗೀತೆ, ಜಾಗೃತಿ ಹಾಡು, ಹೆಣ್ಣು ಸಂಸಾರದ ಕಣ್ಣು ನಾಟಕ ಪ್ರದರ್ಶನಗೊಂಡಿತು. ಸರೂಬಾಯಿ ಅವರು ಪ್ರಾರ್ಥನೆ ಗೀತೆ ಹಾಡಿದರು.
ಅರುಣಾದೇವಿ ಸ್ವಾಗತಿಸಿದರು. ಪಾರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಮಟ್ಟಿ ನಿರೂಪಿಸಿದರು. ಶ್ವೇತಾ ವಂದಿಸಿದರು. ಸಾಕಷ್ಟು ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.