ಮಾಹಿತಿ ನೀಡದ ಅಧಿಕಾರಿಗಳು: ವಾಲ್ಮೀಕಿ ನಾಯಕ ಸಮಾಜ ಆರೋಪ
ಚಿತ್ತಾಪುರ: ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಆಧಿಕಾರಿಗಳು ಮಾಹಿತಿ ಕೇಳಲು ಹೋದ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಪರದಾಡಿಸುತ್ತಿದ್ದಾರೆಂದು ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಡಿಗೇರ, ಕಾರ್ಯದರ್ಶಿ ಆಶೋಕ ಹತ್ತಿಕುಣಿ ಆರೋಪಿಸಿದ್ದಾರೆ.
ಜಿಲ್ಲಾ ಕೇಂದ್ರಕ್ಕೆ ತಾಲೂಕಗಳಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡಿ ಬೇಸತ್ತಿದ್ದಾರೆ. ಅಲ್ಲಿ ಅಧಿಕಾರಿಗಳು ಇರುವುದಿಲ್ಲ, ಕೇವಲ ಒಬ ಪಿಲ್ಡ್ ಆಫೀಸರ್ ಮಾತ್ರ ಇರುತ್ತಾರೆ.
ಇವರಿಗೆ ಕೇಳಿದರೆ ನನಗೇನು ಗೊತ್ತಿಲ್ಲ ನಾನು ಹೊಸದಾಗಿ ಬಂದಿದ್ದೆನೆ ಎಂದು ಹೇಳುತ್ತಾರೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡಿ ಬೇಸತ್ತು ಕಚೇರಿಗೆ ಬರುತ್ತಿಲ್ಲ. ಈ ಸಂಬಂಧ ಗಮನ ಹರಿಸಿ ಸಾರ್ವಜನಿಕರ ತೊಂದರೆ ನಿವಾರಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
2009-10ನೇ ಸಾಲಿನಲ್ಲಿ ಮಂಜೂರಾದ ಕೊಳವೆ ಬಾವಿಗಳಿಗೆ ಇದುವರೆಗೆ ಪಂಪಸೆಟ್ ವಿತರಣೆ ಮಾಡಿರುವುದಿಲ್ಲ ಎಂದು ದೂರಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ನಿಗಮ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.