ಕಾರ್ಮಿಕ ಸಾವು
ಗುಲ್ಬರ್ಗ: ನಗರದ ರಾಣೋಜಿ ಪೀರ ದರ್ಗಾದ ಹತ್ತಿರ ಮನೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಕಟ್ಟಿಗೆ ಪ್ರಾಂಚಿ ಮುರಿದು ಬಿದ್ದ ಪರಿಣಾಮ ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. ಶಹಾಬಜಾರದ ನಾಗರಾಜ ತಂದೆ ಯಲ್ಲಪ್ಪ ಸಿದ್ರಾಮಯ್ಯ ಸ್ವಾಮಿ ಅವರ ಮನೆಯ ಕಟ್ಟಡ ಕೆಲಸಕ್ಕೆ ಹೋದಾಗ ಮನೆಯ ಪ್ಲಾಸ್ಟರ್ ಮಾಡುತ್ತಿದ್ದಾಗ ಕಟ್ಟಿಗೆ ಪ್ರಾಂಚಿ ಮುರಿದು ಬಿದ್ದಾಗ ಆತ ಕೆಳಗೆ ಕುಸಿದುಬಿದ್ದು ತೀವ್ರ ಗಾಯಗೊಂಡಿದ್ದನು. ತಕ್ಷಣ ಆತನನ್ನು ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಮೃತನ ಸಹೋದರ ಸುಭಾಷ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.