ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಿಕ್ಕಿ: ಇಬ್ಬರ ಸಾವು

Lingaraj Badiger
Updated On : 19 Mar 2013, 10:58 am

ಗುಲ್ಬರ್ಗ/ಶಹಾಬಾದ್: ನಗರದಿಂದ ಸಣ್ಣೂರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ತರಿತಾಂಡಾದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲಿಯೆ ಮೃತಪಟ್ಟಿದ್ದು, ಒಟ್ಟು 8 ಜನರಿಗೆ ಗಾಯವಾದ ಘಟನೆ ನಡೆದಿದೆ.
ಗುಲ್ಬರ್ಗದಿಂದ ಶಹಾಬಾದನತ್ತ ಹೊರಟಿದ್ದ ದ್ವಿಚಕ್ರವಾಹನಕ್ಕೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಾಟಾ ಮ್ಯಾಜೀಕ್ ವ್ಯಾನ್ ಡಿಕ್ಕಿ ಹೊಡದ ಪರಿಣಾಮ ದ್ವಿಚಕ್ರ ವಾಹನ ಸವಾರರಾದ ಗುಲ್ಬರ್ಗದ ಮಲ್ಲಿಕಾರ್ಜುನ ಮಾಡ್ಯಾಳ (43) ಹಾಗೂ ಶಿವಕುಮಾರ ಚೆಂಗಟಾ (44) ಸ್ಥಳದಲ್ಲಿಯೆ ಮೃತ ಪಟ್ಟಿದ್ದಾರೆ. ವ್ಯಾನ್‌ನಲ್ಲಿದ್ದ ಎಂಟು ಜನರಿಗೆ ಗಾಯವಾಗಿದ್ದು, ಅವರನ್ನು ಗುಲ್ಬರ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಸಿಪಿಐ ಶರಣಪ್ಪ ಹಿಪ್ಪರಗಿ, ಪಿಎಸ್‌ಐ ಸುರೇಶ ನಾಯಕ ಸಿಬ್ಬಂದಿ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement