ಹಾವು ಕಚ್ಚಿ ವ್ಯಕ್ತಿ ಸಾವು
ಗುಲ್ಬರ್ಗ: ನಾಗೂರ ಗ್ರಾಮದ ಬಳಿ ಹಾವು ಕಡಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ.
ಸುನೀಲ್ ತಂದೆ ಶಿವಶರಣಪ್ಪ ಬೀರನವರ್ ಎಂಬಾತ ಸಾವಿಗೀಡಾಗಿದ್ದಾನೆ. ಮನೆಯ ಬಳಿ ಎತ್ತುಗಳಿಗೆ ಮೇವು ಹಾಕಲು ಹೋದ ಸುನೀಲ್ಗೆ ಹಾವು ಕಡಿದಿದೆ. ತಕ್ಷಣ ಗ್ರಾಮದಲ್ಲಿ ಆಯುರ್ವೇದಿಕ ಔಷಧಿ ಕೊಡಿಸಿ ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.