ಅಂತರ್ಜಾತಿ ವಿವಾಹಕ್ಕೆ ಪೊಲೀಸ್ ಪುರೋಹಿತ್ಯ
ಗುಲ್ಬರ್ಗ: ಅಶೋಕ ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ತಿಮ್ಮಪ್ಪ ಕರೆಕಲ್ ನೇತೃತ್ವದಲ್ಲಿ ಇತ್ತೀಚೆಗೆ ಇಬ್ಬರು ಪ್ರೇಮಿಗಳ ಅಂತರಜಾತಿ ವಿವಾಹ ನೆರವೇರಿತು.
ಆಳಂದ ತಾಲೂಕಿನ ಜಿಡಗಾ ಗ್ರಾಮದ ಶಾಂತಪ್ಪ (ಲಿಂಗಾಯತ) ಮತ್ತು ಚಿಂಚೋಳಿ ತಾಲೂಕಿನ ಸೇಲೇಪೇಟ್ ಗ್ರಾಮದ ಸವಿತಾ (ಪರಿಶಿಷ್ಟ) ಇವರ ಅಂತರಜಾತಿ ವಿವಾಹ ನೆರವೇರಿಸಲಾಯಿತು.ಪಿಎಸ್ಐ ಕಲ್ಲದೇವರ, ಯುವಕನ ತಾಯಿ ಭೀಮಬಾಯಿ, ಯುವತಿಯ ತಾಯಿ ಭಾಗ್ಯವಂತಿ, ತಂದೆ ದಶರಥ, ವಕೀಲರ ಸಂಘದ ಉಪಾಧ್ಯಕ್ಷ ಆನಂದ ದೊಡ್ಮನಿ, ಜಿಡಗಾ ಗ್ರಾಪಂ ಉಪಾಧ್ಯಕ್ಷ ಚನ್ನವೀರ ದಳಪತಿ, ಉದಯಕುಮಾರ ಪಾಟೀಲ್, ಸಂತೋಷ ಮೇಲ್ಮನಿ, ದೇವಿಂದ್ರ ಸಿನ್ನೂರ್, ವೀರೇಶ ಜವಳಿ, ಚಿದಾನಂದ ಸಿಂಗೆ, ಹಣಮಂತ ಇಟಗಿ, ಲಕ್ಷ್ಮೀಕಾಂತ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.