ಇಂದಿನಿಂದ ಜ್ಞಾನಸತ್ರ
ಗುಲ್ಬರ್ಗ: ನಗರದ ಜೇವರ್ಗಿ ಕಾಲೋನಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಂಡಾರಕೇರಿ ಮಠದ ಭಾಗವತಾಶ್ರಮ ಪ್ರತಿಷ್ಠಾನದ ವತಿಯಿಂದ ಮಾ. 20 ರಿಂದ ಮಾ. 27ರವರೆಗೆ ಬೆಳಗ್ಗೆ 8 ರಿಂದ 9ಗಂಟೆಯವರೆಗೆ ಹರಿಕಥಾಮೃತಸಾರ ಪ್ರವಚನ ಹಾಗೂ ಸಾಯಂಕಾಲ 6.30 ರಿಂದ 8 ಗಂಟೆಯವರೆಗೆ ಮತ್ಸ್ಯಪುರಾಣ ಪ್ರವಚನ ನಡೆಯಲಿದೆ.ಪಂಡಿತ ರಘೋತ್ತಮಚಾರ್ಯ ನಾಗಸಂಪಿಗೆಯವರು ಪ್ರವಚನ ನೀಡಲಿದ್ದಾರೆ ಎಂದು ಕೃಷ್ಣಮಂದಿರದ ಸಂಯೋಜಕ ನವಲಿ ಕೃಷ್ಣಾಚಾರ್ಯ ತಿಳಿಸಿದ್ದಾರೆ.
ನಾಳೆ ಬಿಎಸ್ಸಾರ್ ಸಭೆ
ಗುಲ್ಬರ್ಗ: ಬಳ್ಳಾರಿಯಲ್ಲಿ ಮಾ.21 ರಂದು ಬೆಳಗ್ಗೆ 11ಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ಕರೆಯಲಾಗಿದೆ.ಪಕ್ಷದ ರಾಜ್ಯಾಧ್ಯಕ್ಷ ಶ್ರೀರಾಮುಲು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಯ ಪೂರ್ವ ಸಿದ್ಧತಾ ಸಲುವಾಗಿ ಚರ್ಚಿಸಲಾಗುವುದು.
ಅಂದಿನ ಆ ಸಭೆಗೆ ಗುಲ್ಬರ್ಗ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮ, ತಾಲೂಕಿನ ಘಟಕಗಳ ಪದಾಧಿಕಾರಿಗಳು ಮತ್ತು ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷ ಕಲ್ಯಾಣರಾವ ಅಂಬಲಗಿ ಮನವಿ ಮಾಡಿದ್ದಾರೆ.
ವೃದ್ಧನ ಕೊಲೆ
ಗುಲ್ಬರ್ಗ: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ವೃದ್ಧನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ತಾರಫೈಲ್ ಬಡಾವಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಶರಣಪ್ಪ ತಂದೆ ಸಾಯಿಬಣ್ಣ (60) ಎಂಬ ವೃದ್ಧ ಮೃತಪಟ್ಟವನು. ದಿಗಂಬರ ಗೊಂದಡಗಿ ಹಲ್ಲೆ ನಡೆಸಿದಾಗ ವೃದ್ಧ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.