ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣದ ಭರವಸೆ

Mainashree
Updated On : 20 Mar 2013, 12:02 pm

ಸುರಪುರ: ತಾಲೂಕಿನ ಎಸ್‌ಕೆ ಲಿಂಗದಳ್ಳಿ ಗ್ರಾಮದಲ್ಲಿ ಪವಾಡ ಪುರುಷ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಿಸಿ ಕೊಡುವುದಾಗಿ ಶಾಸಕ ರಾಜುಗೌಡ ಗ್ರಾಮಸ್ಥರಿಗೆ ಭರವಸೆ ನೀಡಿದರು. ಸುವರ್ಣ ಗ್ರಾಮ ಯೋಜನೆಯ ವಿವಿಧ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಸಲ್ಲಿಸಿದ ಮನವಿ ಸ್ವೀಕರಿಸಿ, ನಾನು ಕೂಡಾ ರಾಮಲಿಂಗೇಶ್ವರ ಭಕ್ತನಾಗಿದ್ದೇನೆ. ದೇವಸ್ಥಾನದ ಕೊರತೆಯಿರುವುದರಿಂದ ಭಕ್ತರಿಗೆ ಅನಾನುಕೂಲವಾಗಿದೆ. ಇದು ನನ್ನ ಗಮನಕ್ಕೂ ಬಂದಿದ್ದು ಶೀಘ್ರದಲ್ಲಿ ಸರ್ಕಾರದಿಂದ ಅನುದಾನ ಒದಗಿಸಿ ದೇವಸ್ಥಾನ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ನಿಂಗಣ್ಣ ಬಾದ್ಯಾಪುರ, ಸಣ್ಣ ಮಾನಯ್ಯ, ಎಪಿಎಂಸಿ ಸದಸ್ಯ ಪರಮಣ್ಣ ಹಾಲಬಾವಿ, ಗಂಗಣ್ಣ ಪೂಜಾರಿ, ಸದಾಶಿವ, ಶರಣು ಮಕಾಶಿ, ಹಣಮಂತ ಮಕಾಶಿ, ಮಾನಪ್ಪ ದಳವಾಯಿ , ತಿಮ್ಮಣ್ಣ, ದುರ್ಗಪ್ಪ ಮಕಾಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement