ಶರಣ ಸಂಸ್ಕೃತಿ ಮಹಾಯಾತ್ರೆಗೆ ಅದ್ಧೂರಿ ಸ್ವಾಗತ
ಸುರಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಜಯಂತಿ ಸಮಿತಿ ಸಹಯೋಗದಲ್ಲಿ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಬಸವನ ಬಾಗೇವಾಡಿಯಿಂದ ಆರಂಭವಾಗಿರುವ ಶರಣ ಸಂಸ್ಕೃತಿ ಮಹಾಯಾತ್ರೆ ಮಂಗಳವಾರ ರಂಗಂಪೇಟೆ ತಲುಪುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಆಚರಣೆ: ನಂತರ ರಂಗಂಪೇಟೆಯ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಈ ಯಾತ್ರೆಯ ರೂವಾರಿ ಅರವಿಂದ ಜತ್ತಿ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, 1913ರಂದು ದಾವಣಗೆರೆಯ ಮೃತ್ಯುಂಜಯ ಸ್ವಾಮಿಗಳು ಹಾಗೂ ಹರ್ಡೇಕರ್ ಮಂಜಪ್ಪನವರಿಂದ ಆರಂಭವಾದ ಬಸವ ಜಯಂತಿ ಆಚರಣೆ ಇಂದಿಗೆ ಶತಮಾನ ಪೂರೈಸುತ್ತಿದೆ. ಆ ಸವಿ ನೆನಪಿಗಾಗಿ ಈ ಶರಣ ಸಂಸ್ಕೃತಿ ಮಹಾಯಾತ್ರೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಮಾಜಿ ಅಧ್ಯಕ್ಷ ಬಸವರಾಜ ನಿಷ್ಠಿ ದೇಶಮುಖ, ಕಸಾಪ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಶಿವಶರಣಪ್ಪ ಹೆಡಗಿನಾಳ, ಸೋಮಶೇಖರ ಶಾಬಾದಿ, ನಾನಾಗೌಡ ಮಾಳನೂರು ವೇದಿಕೆಯಲ್ಲಿದ್ದರು.
ಬೈಕ್ ರ್ಯಾಲಿ: ಮಹಾಯಾತ್ರೆಯನ್ನು ಹಸನಾಪುರ ವೃತ್ತದಿಂದ ಸುರಪುರ ಮಾರ್ಗವಾಗಿ ಕುಂಬಾರಪೇಟೆವರೆಗೆ ತಾಲೂಕು ವೀರಶೈವ ಯುವ ವೇದಿಕೆ ನೇತೃತ್ವದಲ್ಲಿ ಬೈಕ್ ರ್ಯಾಲಿ ಮೂಲಕ ಕರೆ ತರಲಾಯಿತು. ಈ ಸಂದರ್ಭದಲ್ಲಿ ಸೂಗೂರೇಶ ವಾರದ, ರಾಜೂ ಕುಂಬಾರ ಜಾಲಿಬೆಂಚಿ, ಮಲ್ಲಿಕಾರ್ಜುನರೆಡ್ಡಿ ಕೋಳಿಹಾಳ, ಶಿವರುದ್ರ ಹುಳ್ಳಿ, ಶಾಂತು ಬಾರಿ, ಡಾ.ಶರಣಪ್ಪ ಯಾಳಗಿ, ಶರಣಪ್ಪ ಹೊಸ್ಮನಿ, ಶಿವರಾಜ ಚೊಕ್ಕ, ನಿಂಗಣ್ಣ ಗುಳಗಿ ಇದ್ದರು.
ಯಾದಗಿರಿಯಲ್ಲಿ: ಬಸವಣ್ಣನವರ ಜನ್ಮ ಶತಮಾನೋತ್ಸವ ನಿಮಿತ್ತ ನಾಡಿನಾದ್ಯಂತ ಸಂಚರಿಸುತ್ತಿರುವ ಶರಣ ಸಂಸ್ಕೃತಿ ಯಾತ್ರೆಗೆ ನಗರದಲ್ಲಿ ಸೋಮವಾರ ತಡರಾತ್ರಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಯಾತ್ರೆ ನಗರ ಪ್ರವೇಶಿಸುತ್ತಿದ್ದಂತೆ ನೇತಾಜಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ವೆಂಕಟರೆಡ್ಡಿ ಮುದ್ನಾಳ ಅವರು ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು.
ಸುಮಂಗಲಿಯರ ಕಳಸದೊಂದಿಗೆ ಸಡಗರದ ಮೆರವಣಿಗೆ ನಡೆಸಲಾಯಿತು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ದಂಪತಿ, ಹಣಮಂತರೆಡ್ಡಿ ಮುದ್ನಾಳ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ್, ಬಸವರಾಜ ಜೈನ್, ಬಸವಂತರಾಯಗೌಡ ಮಾಲಿಪಾಟೀಲ್, ಸೂಗಣ್ಣ ಅರಳಿ, ಡಾ.ಸುಭಾಷಚಂದ್ರ ಕೌಲಗಿ, ನೀಲಕಂಠ ಶೀಲವಂತ, ಬಸವರಾಜ ಮೋಟ್ನಳ್ಳಿ, ವಿ.ಸಿ.ರೆಡ್ಡಿ, ಅಜಯ್ ಸಿನ್ನೂರ, ವಿಶ್ವನಾಥ ಕಾಜಗಾರ, ಸೂಗಣ್ಣ ಅರಳಿ ಮೊದಲಾದವರು ಇದ್ದರು.