ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣ ಸಂಸ್ಕೃತಿ ಯಾತ್ರೆಗೆ ಭವ್ಯ ಸ್ವಾಗತ

Mainashree
Updated On : 20 Mar 2013, 11:49 am

ಶಹಾಬಾದ್: ಶಹಾಬಾದ್  ಪಟ್ಟಣಕ್ಕೆ ಇತ್ತೀಚೆಗೆ ಆಗಮಿಸಿದ ಶರಣ ಸಂಸ್ಕೃತಿ ಮಹಾಯಾತ್ರೆಗೆ ಬಸವೇಶ್ವರ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಚಿತ್ತಾಪುರದಿಂದ ಆಗಮಿಸಿದ ಯಾತ್ರೆಯನ್ನು ವಾಡಿ ಕ್ರಾಸ್‌ನಿಂದ ನೂರಾರು ಯುವಕರು ದ್ವಿಚಕ್ರ ವಾಹನಗಳ ಮೆರವಣಿಗೆಯೊಂದಿಗೆ ಬಸವೇಶ್ವರ ವೃತ್ತಕ್ಕೆ ಬರಮಾಡಿಕೊಂಡರು.  ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ಉಪಾಧ್ಯಕ್ಷ ಅಣ್ಣಪ್ಪ ದಸ್ತಾಪುರ, ಭಂಕೂರನ ಬಸವ ಸಮಿತಿ ಅಧ್ಯಕ್ಷ ಬಸಯ್ಯ ಪೂಜಾರಿ, ವಚನೋತ್ಸವ ಸಮಿತಿಯ ಮಹಾಲಿಂಪ್ಪ ಇಂಗಿನಶೆಟ್ಟಿ, ಶರಣು ಬಿರಾಳ ಸೇರಿದಂತೆ  ಬಸವಾಭಿಮಾನಿಗಳು ಹೂಗಳನ್ನು ಚಲ್ಲಿ ಸ್ವಾಗತಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಮೆರವಣಿಗೆ ನಡೆಯಿತು.
ಸಮಾಜದ ಮುಖಂಡರಾದ ಸೂರ್ಯಕಾಂತ ವಾರದ, ಸಾಹೇಬಗೌಡ ಬೊಗುಂಡಿ, ಚಂದ್ರಕಾಂತ ದಸ್ತಾಪುರ, ಅರುಣಕುಮಾರ ಪಟ್ಟಣಕರ್, ಅಣವೀರ ಇಂಗಿನಶೆಟ್ಟಿ, ನಾಗಣ್ಣ ರಾಂಪುರೆ, ಗಿರಿಮಲ್ಲಪ್ಪ ವಳಸಂಗಿ, ಹಳೆ ಶಹಾಬಾದ್ ಬಸವ ಸಮಿತಿ ಸದಸ್ಯರು, ನಗರ ವೀರಶೈವ ಸಮಾಜ, ಬಸವ ಸಮಿತಿ ಸದಸ್ಯರು, ವಿವಿಧ ಸಮಾಜದ ಬಸವಾಭಿಮಾನಿಗಳು ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement