ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಅಪಘಾತ ರಹಿತ ರಸ್ತೆ ನಿರ್ಮಿಸಿ'

Mainashree
Updated On : 21 Mar 2013, 11:42 am

ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ರಾಜ್ಯ, ಹೊರರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುವುದರಿಂದ ಬೆಟ್ಟದ ಮೇಲೆ ಹಾದು ಹೋಗುವ ರಸ್ತೆಯನ್ನು ಗುಣಮಟ್ಟ ಹಾಗೂ ಅಪಘಾತ ರಹಿತ ರಸ್ತೆ ನಿರ್ಮಿಸಲು ಶಾಸಕ ವಾಲ್ಮೀಕಿ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.
ನಾಲವಾರ ವಲಯದ ಶಿವನಗರ ದೊಡ್ಡ ತಾಂಡಾದಿಂದ ದಂಡಗುಂಡ ಗ್ರಾಮದವರೆಗೆ 2.27 ಕೋಟಿ ವೆಚ್ಚದಲ್ಲಿ 5.85 ಕಿ.ಮೀ.ವರೆಗೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬೆಟ್ಟದ ಮೇಲೆ ಇರುವ ಇಕ್ಕಟ್ಟಾದ ರಸ್ತೆಗಳನ್ನು ವೀಕ್ಷಿಸಿ ಮಾತನಾಡಿದರು.
ಇಕ್ಕಟ್ಟಾದ ರಸ್ತೆಯಿಂದ ಅಪಘಾತ ಆಗುವ ಸಂಭವ ಹೆಚ್ಚು ಇರುವುದರಿಂದ ಇಂಥ ಸ್ಥಳಗಳಲ್ಲಿ ದೊಡ್ಡ ರಸ್ತೆಗಳನ್ನು ನಿರ್ಮಿಸಿ ಅಪಘಾತವಾಗದಂತೆ ನಿರ್ಮಿಸಲು ಸೂಚಿಸಿದರು. ಎಇಇ ಕಾಳೆ, ಕುಲ್ಕರ್ಣಿ, ಜೆಇ ಖಾದ್ರಿ, ಅಧಿಕಾರಿಗಳಾದ ಪುಣ್ಯಶೆಟ್ಟಿ, ಸೂರ್ಯಕಾಂತ, ಗ್ರಾಪಂ ಸದಸ್ಯ ಶಿವುರೆಡ್ಡಿಗೌಡ, ಸಿದ್ದಣ್ಣ ಕಲಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement