ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಪ್ರಯತ್ನಿಸಿ'

Mainashree
Updated On : 22 Mar 2013, 11:46 am

ಕನ್ನಡಪ್ರಭ ವಾರ್ತೆ ಚಿತ್ತಾಪುರ ಮಾ.21
ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಸಾಹಿತಿಗಳು ಮತ್ತು ಸಾಹಿತ್ಯ ಪರಷತ್ತು ಪ್ರಯತ್ನಸಬೇಕೆಂದು ಪತ್ರಕರ್ತ ಶಿವರಂಜನ ಸತ್ಯಂಪೇಟ್ ಹೇಳಿದರು.
ತಾಲೂಕಿನ ಕಾಳಗಿ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಹಮ್ಮಿಕೊಂಡ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಆರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಕೆಲಸವೆಂದರೆ ಕೇವಲ ಕನ್ನಡ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವುದಷ್ಟೆ ಅಲ್ಲ. ಕನ್ನಡಿಗರ ಮೂಲ ಅವಶ್ಯಕತೆಗಳಾದ ರಸ್ತೆ, ಕುಡಿವ ನೀರು, ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸಹ ಕನ್ನಡದ ಸೇವೆಯಾಗಿದೆ ಎಂದರು.
ವಿಂಗಡನೆ: ಕಸಾಪ ತಾಲೂಕಾಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಹಳ್ಳಿಗಳಿಗೆ ತಲುಪಿಸುವ ಉದ್ದೇಶದಿಂದ ಜಿಪಂ ಕ್ಷೇತ್ರಗಳನ್ನು ವಲಯಗಳನ್ನಾಗಿ ವಿಂಗಡಿಸಿ ಜವಾಬ್ದಾರಿಗಳನ್ನಾಗಿ ಹಂಚಲಾಗಿದೆ. ಸ್ಥಳೀಯ ಕವಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸು ಉದ್ದೇಶ ಕಸಾಪಕ್ಕೆ ಇದೆ ಎಂದು ಹೇಳಿದರು. ತಾಪಂ ಸದಸ್ಯ ಚಂದ್ರಕಾಂತ ಜಾಧವ, ಗ್ರಾಪಂ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಸಯ್ಯ ಸ್ವಾಮಿ ಪ್ಯಾಟಿ ಮಠ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲೆ, ಪಂಚಾಕ್ಷರಿ ಪೂಜಾರಿ, ನಾಗವೇಣಿ ಹಿರೇಮಠ, ಉದಯಕುಮಾರ ಮಂಗಲಗಿ, ವೀರಯ್ಯಸ್ವಾಮಿ, ಶಿವಾನಂದ ಸ್ಥಾವರಮಠ, ಶ್ರೀದೇವಿ ಚವಡಗುಂಡಿ, ಉಮೇಶ ಓಕಳಿ ಉಪಸ್ಥಿತರಿದ್ದರು.
ಪ್ರಾಚಾರ್ಯ ರಾಮಚಂದ್ರ ಬಾಸುತ್ಕರ ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ, ಸುಧಾ ಪ್ರಾರ್ಥನೆ ಗೀತೆ ಹಾಡಿದರು. ಕಾವೇರಿ ಇವಣಿ ವಚನ ಹಾಡಿದರು. ಡಾ. ಶಿವಶರಣಪ್ಪ ಢಾಬಾ ಪ್ರಾಸ್ತಾವಿಕ ಮಾತನಾಡಿದರು. ವಲಯ ಅಧ್ಯಕ್ಷ ಗುಂಡಪ್ಪ ಕರೆಮನೋರ ಸ್ವಾಗತಿಸಿದರು. ರಮೇಶ ಮಾಡಬೂಳ ನಿರೂಪಿಸಿದರು. ಸಂತೋಷ ಪತಂಗೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement