ಚೆನ್ನಬಸವ ಶಿವಯೋಗಿ ಪಲ್ಲಕ್ಕಿ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮಾ.21
ಪಟ್ಟಣದ ಹಾರಕೂಡ ಚೆನ್ನಬಸವ ಶಿವಯೋಗಿಗಳ 62ನೇ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಬುಧವಾರ ಸಂಜೆ ವರ್ಣರಂಜಿತವಾಗಿ ಪಲ್ಲಕ್ಕಿ ಮತ್ತು ಉಚ್ಚಾಯಿ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು.
ಚೆನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಮತ್ತು ಉಚ್ಚಾಯಿಗಳಿಗೆ ವಿವಿಧ ಬಣ್ಣ ಬಣ್ಣದ ಹೂವು ಮತ್ತು ತಳೀರು ತೋರಣಗಳಿಂದ ಮತ್ತು ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಪಲ್ಲಕ್ಕಿ ಮತ್ತು ಉಚ್ಚಾಯಿ ಮೆರವಣಿಗೆಯನ್ನು ಪಟ್ಟಣದ ಗಾಂಧಿ ಚೌಕ್, ತರಕಾರಿ ಮಾರ್ಕೆಟ್, ಕಲ್ಯಾಣಗಡ್ಡಿ, ಧನಗರ ಗಲ್ಲಿ, ಜೋಶಿ ಗಲ್ಲಿ ಮುಂತಾದ ಬಡಾವಣೆಗಳ ಪ್ರಮುಖ ರಸ್ತೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ್, ಸುಭಾಷ ಸೀಳಿನ್, ರಾಜಶೇಖರ ಮಜ್ಜಗಿ, ಮಲ್ಲಿಕಾರ್ಜುನ ಪಾಲಾಮೂರ, ಸಂತೋಷ ಸೀಳಿನ್, ಸಂತೋಷ ಗಡಂತಿ, ಸಂತೋಷ ಕಡಗದ, ಶ್ರೀಕಾಂತ ಸುಂಕದ, ಶಂಕರ ಅಲ್ಲಾಪುರ, ರೇವಣಸಿದ್ದಪ್ಪ ಮಜ್ಜಗಿ, ನಾಗರಾಜ ಕಲಬುರ್ಗಿ, ವೀರುಪಾಕ್ಷ ಎಂಪಳ್ಳಿ, ದತ್ತು ಬಾಸೂತಕರ್ ಇತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು.