ಅರಣ್ಯದಿಂದ ಮಣ್ಣಿನ ಸವಕಳಿ ತಡೆ ಸಾಧ್ಯ
ಯಾದಗಿರಿ: ಅರಣ್ಯಗಳು ಮಣ್ಣಿನ ಸವಕಳಿ ತಡೆಯುವ ಮೂಲಕ ಅದರ ಗುಣಮಟ್ಟವನ್ನು ಕಾಪಾಡುತ್ತವೆ. ಅನೇಕ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುತ್ತವೆ. ಇವು ದೇಶದ ನೈಸರ್ಗಿಕ ಶ್ರೀಮಂತಿಕೆಯ ಸೂಚಕಗಳಾಗಿವೆ ಎಂದು ವಿಜ್ಞಾನ ಸಂಯೋಜಕ ಸೂರ್ಯಪ್ರಕಾಶ ಘನಾತೆ ಹೇಳಿದರು.
ತಾಲೂಕಿನ ಲಿಂಗೇರಿ ಸ್ಟೇಶನ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಅರಣ್ಯ ದಿನಾಚರಣೆ ನಿಮಿತ್ತ ಉಪನ್ಯಾಸ ನೀಡಿದ ಅವರು, ಅರಣ್ಯಗಳು ಪರಿಸರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದು, ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲಗಳು.
ಅರಣ್ಯಗಳು ಜಲಚಕ್ರವನ್ನು ಉಳಿಸುತ್ತವೆ. ವನ್ಯ ಪ್ರಾಣಿಗಳಿಗೆ ಅವು ವಾಸನೆಲೆ ಒದಗಿಸುತ್ತವೆ ಎಂದರು.
ಪ್ರಭಾರ ಮುಖ್ಯಾಧ್ಯಾಪಕ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಭೀಮರಾಯ ತಳೆವಡಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳ ವಂದಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಿದ್ದರು.