ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಕ್ಷಣ ಸಮಾಜಕ್ಕೆ ಉಪಯೋಗವಾಗಲಿ: ಜಲಾದೆ

Lingaraj Badiger
Updated On : 23 Mar 2013, 10:50 am

ಬೀದರ್: ಶಿಕ್ಷಣ ಬದುಕನ್ನು ಹಸನಗೊಳಿಸುವುದರ ಜೊತೆ ಸಮಾಜಕ್ಕೆ ಉಪಯೋಗವಾಗುವಂತಾಗಬೇಕು. ಅದರ ವಿನಹ ವ್ಯಾಪಾರಕ್ಕಾಗಿ ಕಲಿಯಬಾರದು ಎಂದು ಸರಸ್ವತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಕರೆಕೊಟ್ಟರು.
 ತಾಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ನಡೆಯುತ್ತಿರುವ ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ನೈಟಿಂಗೇಲ್ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಇಂದಿನ ಯುವಕರು ಶಿಕ್ಷಣ ಕಲಿತು ತಮ್ಮ ಅಮೂಲ್ಯವಾದ ಬದುಕು ಹಸನುಗೊಳಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಯುವ ಬಸವ ಕೇಂದ್ರದ ಅಧ್ಯಕ್ಷ ಹಾಗೂ ನೈಟಿಂಗೇಲ್ ಪಬ್ಲಿಕ್ ಶಾಲೆಯ ನಿರ್ದೇಶಕ ಸುರೇಶ ಚನ್ನಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರದ ಬೇರು ಬೆಳೆಯಲು ಮನೆಯ ಪಾತ್ರ ಬಹಳ ಮುಖ್ಯ. ತಂದೆ-ತಾಯಿಗಳು ಮಕ್ಕಳಲ್ಲಿ ದೇಶದ ನಾಡಿನ ಸಂಸ್ಕೃತಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಮುಖ್ಯ ಅತಿಥಿಯಾಗಿ ಮಾರುತಿ ಮಾಸ್ಟರ್, ಗ್ರಾಪಂ ಅಧ್ಯಕ್ಷ ಸುನೀಲ್ ಸಿದ್ದ, ಉಪಾಧ್ಯಕ್ಷ ರಜಾಕ್ ಮಿಯ್ಯಾ ಭೈರುಪಿ, ಗ್ರಾ.ಪಂ. ಸದಸ್ಯರಾದ ಕಾಶಿನಾಥ ಅಲ್ದಿ, ಗ್ರಾಮದ ಹಿರಿಯರಾದ ವೈಜಿನಾಥ ಸಿದ್ದಾ, ಬಸವರಾಜ ಜಗ್ದೆ, ವೀರಶೆಟ್ಟಿ ಸಂಗೋಳಗಿ ಉಪಸ್ಥಿತರಿದ್ದರು. ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ನಡೆಸುತ್ತಿರುವ ಪ್ರತಿಷ್ಠಿತ ವಿದ್ಯಾಪೀಠಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಸುರೇಶ ಚನ್ನಶೆಟ್ಟಿಯವರಿಗೆ ಗ್ರಾಮದವರು ಸನ್ಮಾನಿಸಿ ಅಭಿನಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement