ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾ ಪಂಚಾಯ್ತಿ ಬಿಜೆಪಿ ಎಂಟು ಸದಸ್ಯರು ಕೆಜೆಪಿಗೆ

Mainashree
Updated On : 24 Mar 2013, 11:15 am

ಕನ್ನಡಪ್ರಭ ವಾರ್ತೆಗುಲ್ಬರ್ಗಮಾ.23
ಬಿಜೆಪಿ ತೊರೆದು 8 ಜನ ಜಿಪಂ ಸದಸ್ಯರು ಗುಲ್ಬರ್ಗ ಜಿಲ್ಲಾ ಅಭಿವೃದ್ಧಿ ರಂಗವನ್ನು ರಚಿಸಿಕೊಂಡು ಕೆಜೆಪಿ ಬೆಂಬಲಿಸಿ ಅಭಿವೃದ್ಧಿ ಪರ ಕೆಲಸ ನಿರ್ವಹಿಸುವುದಾಗಿ ಘೋಷಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕೆಜೆಪಿ ಸಭೆಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸುತ್ತಲೇ ಬಿಜೆಪಿ ತೊರೆದ ಈ 8 ಜನರಿಗೆ ಕೆಜೆಪಿ ಗುರುತಿನ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.
ಜಿಲ್ಲಾ ಪಂಚಾಯ್ತಿಗೆ ಬಿಜೆಪಿಯಿಂದ ಚುನಾಯಿತರಾದ ಶ್ರೀನಾಥ ಶರಣಪ್ಪ ಪಿಲ್ಲಿ(ಕೋಲ್ಕುಂದಾ- 43), ಜಗಜೀವನರೆಡ್ಡಿ(ಕೊಂಚಾವರಂ), ಸುನಂದಾ ರವಿರಾಜ ಕೊರವಿ(ಚಿಮ್ಮನಚೋಡ), ಸಿದ್ದಾರ್ಥ ಬಸರಿಗಿಡ(ಬಡದಾಳ), ಪ್ರಕಾಶ ಜಮಾದಾರ(ಮಾಶಾಳ), ಮತೀನ ಪಟೇಲ್(ಕರಜಗಿ), ಅನ್ನಪೂರ್ಣ ಅರುಣಕುಮಾರ ಪಾಟೀಲ್(ಗೊಬ್ಬೂರ- ಬಿ), ರೇಣುಕಾ ಗಂಗರಾಮ(ಕೋಡ್ಲಿ) ಅವರು ಬಿಜೆಪಿಯನ್ನು ತೊರೆದಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ತೊರೆದು ಈ 8 ಜನ ಸದಸ್ಯರು ಗುಲ್ಬರ್ಗ ಜಿಲ್ಲಾ ಅಭಿವೃದ್ಧಿ ರಂಗವನ್ನು ಪ್ರತ್ಯೇಕವಾಗಿ ರಚಿಸಿಕೊಂಡು ಕಳೆದ ಫೆ.20ರಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರವನ್ನು ಬರೆದಿದ್ದಾಗಿ ಅವರು ತಿಳಿಸಿದರು.
ಕೆಜೆಪಿ ಮುಖಂಡ, ಅಫಜಲ್ಪುರ ಕ್ಷೇತ್ರದ ಅಭ್ಯರ್ಥಿ ಎಂ.ವೈ. ಪಾಟೀಲ್, ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಎಸ್.ಕೆ. ಕಾಂತಾ, ಉತ್ತರ ಮತಕ್ಷೇತ್ರದ ಅಭ್ಯರ್ಥಿ ನಾಸೀರ್ ಹುಸೇನ್, ಮುಖಂಡರಾದ ತಿಪ್ಪಣಪ್ಪ ಕಮಕನೂರ, ಬಸವರಾಜ ಇಂಗಿನ, ಸುರೇಶ ಸಜ್ಜನ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement