ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದೃಶ್ಯ ಮಾಧ್ಯಮಗಳಿಂದ ಅವಸಾನದತ್ತ ರಂಗಕಲೆ

Rashmi Kasaragodu
Updated On : 25 Mar 2013, 11:14 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.24
ದೃಶ್ಯ ಮಾಧ್ಯಮಗಳ ಹಾವಳಿಯಿಂದ ಇಂದು ನಾಟಕಗಳನ್ನು ನೋಡುವ ಗೀಳು ಜನರಲ್ಲಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ನಾಟಕಗಳು ನಶಿಸುತ್ತಿವೆ ಎಂದು ಗುರಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರಾವಾಹಿಗಳಿಂದ ಸಮಯ ಹಾಳು: ಹಿಂದಿನ ಕಾಲದಲ್ಲಿ ನಾಟಕಗಳೆಂದರೆ ಜನ ಎಲ್ಲವನ್ನು ಬಿಟ್ಟು ಹೋಗುವಂತಹ ಸಂದರ್ಭವಿತ್ತು. ಮಾತ್ರವಲ್ಲ, ನಾಟಕಗಳಲ್ಲಿ ಪೌರಾಣಿಕತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ನಾವು, ಬದಲಾದ ಸಂದರ್ಭಗಳ ಹೊಡೆತಕ್ಕೆ ಸಿಲುಕಿ ಇಂದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರವಾಹಿಗಳಿಗೆ ಹೆಚ್ಚಿನ ಮಹತ್ವ ನೀಡುವುದರೊಂದಿಗೆ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ನೋವಿನಲ್ಲಿರುವ ಯಾವುದೇ ವ್ಯಕ್ತಿ ನಾಟಕ ನೋಡಿದಾಗ ಆತನಲ್ಲಿದ್ದ ಖಿನ್ನತೆ ದೂರವಾಗಲು ಸಾಧ್ಯವಾಗುತ್ತದೆ. ನಗರ ಪ್ರದೇಶದಲ್ಲಿ ಇಂದು ಸಿನಿಮಾ ಹಾವಳಿಯಿಂದ ನಾಟಕ ಕಂಪನಿಗಳು ನಷ್ಟದತ್ತ ಸಾಗಿವೆ. ಕಲೆಯನ್ನೇ ಜೀವನವಾನ್ನಾಗಿ ಇಟ್ಟುಕೊಂಡ ಅದೆಷ್ಟೋ ಕುಟುಂಬಗಳು ಇಂದು ರಂಗಸಜ್ಜಿಕೆಯಿಂದ ದೂರವಾಗಿವೆ. ಇಂತಹ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗ್ರಾಮೀಣ ಭಾಗದಲ್ಲಿ ನಾಟಕಗಳನ್ನು ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಇಲಾಖೆ ಕಾರ್ಯಕ್ಕೆ ಮೆಚ್ಚುಗೆ: ಇಲಾಖೆಯ ಸಹಾಕಯ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನತೆಗೆ ತಲತಲಾಂತರದಿಂದ ಬಂದ ನಾಟಕ, ರಂಗಭೂಮಿಯ ವೈಭವವನ್ನು ಉಳಿಸಿ ಯುವ ಸಮಾಜಕ್ಕೆ ಇವುಗಳನ್ನು ಪರಿಚಯಿಸುವ ದೃಷ್ಟಿಯಿಂದ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂತಹ ನಾಟಕಗಳನ್ನು ಹೆಚ್ಚೆಚ್ಚು ಏರ್ಪಡಿಸುವ ಮೂಲಕ ಕಲೆಯ ಮಹತ್ವದ ಬಗ್ಗೆ ತಿಳಿಯಪಡಿಸಲಾಗುವುದು ಎಂದರು.
ಹಾಲಭಾವಿ ಗ್ರಾಮದ ರಂಗಕರ್ಮಿ ಶರಣಪ್ಪ, ಮಲ್ಲೇಶ ಕುರಕುಂದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement