'ಎಲ್ಲ ಗ್ರಾಮಕ್ಕೆ ಸಿಮೆಂಟ್ ರಸ್ತೆ ಕಲ್ಪಿಸಿದೆ'
ಚಿತ್ತಾಪುರ: ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಇತರ ಕಾಮಗಾರಿಗಳು ಕಲ್ಪಿಸಲಾಗಿದೆ ಎಂದು ಶಾಸಕ ವಾಲ್ಮೀಕಿ ನಾಯಕ ಹೇಳಿದರು.
ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ 31 ಲಕ್ಷ ವೆಚ್ಚದಲ್ಲಿ ಸುವರ್ಣ ಗ್ರಾಮದೋಯ ಯೋಜನೆ, 4 ಲಕ್ಷ ವೆಚ್ಚದಲ್ಲಿ ದ್ಯಾವಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ 12 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜನಾಂಗದವರ ಬಡಾವಣೆಗೆ ಸಿಮೆಂಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಮತೀರ್ಥ ಗ್ರಾಮ ಅಭಿವೃದ್ಧಿಗೆ 50 ಲಕ್ಷ ಒದಗಿಸಲಾಗಿದೆ ಎಂದರು.
60 ವರ್ಷ ಅಧಿಕಾರ ಮಾಡಿದ ಇತರ ಪಕ್ಷಗಳು ಮಾಡದ ಕೆಲಸ, ಕೇವಲ 5 ವರ್ಷದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಅಭಿವೃದ್ಧಿ ಕೈಗೊಂಡಿದೆ ಎಂದ ಅವರು, ಕಾಮಗಾರಿ ಗುಣಮಟ್ಟದಲ್ಲಿ ಮಾಡಬೇಕೆಂದು ಎಂಜಿನಿಯರ್ಗೆ ಎಚ್ಚರಿಕೆ ನೀಡಿದರು.
ಬಿಜೆಪಿ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿದರು. ಮುಖಂಡರಾದ ಬಸಣ್ಣಗೌಡ ಪಾಟೀಲ್, ನಾಗಣ್ಣ ಪುರನ್, ಕಾಶೀಮಸಾಬ್ ಮುಲ್ಲಾ, ರಾಮರೆಡ್ಡಿ ಭಂಕಲಗಿ, ಸೀತಾಬಾಯಿ, ಜಿಪಂ ಎಡಬ್ಲೂಇ ನಂದಕುಮಾರ ಕುಲಕರ್ಣಿ, ನಾಗಣ್ಣಗೌಡ, ಭೂ ಸೇನಾ ನಿಗಮ ಎಡಬ್ಲೂಇ ಬಸವರಾಜ ರಾಠೋಡ ಉಪಸ್ಥಿತರಿದ್ದರು.