ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು 'ಸ್ವರ್ಗಕ್ಕೆ ದಾರಿ'

Lingaraj Badiger
Updated On : 27 Mar 2013, 10:45 am

ಸೇಡಂ: ತಾಲೂಕಿನ ಜಾಕನಪಲ್ಲಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾನು- ನಮ್ಮೂರು ಶಾಲಾ ಮಕ್ಕಳ ವೇದಿಕೆಯಿಂದ ಮಾ.27ರಂದು ನಾಟಕ ಪ್ರದರ್ಶನ ನಡೆಯಲಿದೆ.
ನಾಟಕಕಾರ ಪ್ರಭಾಕರ್ ಜೋಶಿಯವರ ಸ್ವರ್ಗಕ್ಕೆ ದಾರಿ ಎನ್ನುವ ನಾಟಕವನ್ನು ದೊಡ್ಡಾಟದ ಹಾಡು ಗತ್ತುಗಳೊಂದಿಗೆ ಗೊಂಬೆಯಾಟದ ಮೂಲಕ ಹೊಸ ರೀತಿಯ ಪ್ರಯೋಗಕ್ಕೆ ಅಣಿಯಾಗಿದೆ.
ಈ ಮೂಲಕ ರಂಗಭೂಮಿಯ ಸವಾಲುಗಳ ಮತ್ತು ಸಮಸ್ಯೆಗಳನ್ನು ಮೆಲುಕು ಹಾಕಲಿದೆ ಮತ್ತು ತಿಂಗಳ ಸಂಜೆ ಮತ್ತು ನಾನು- ನಮ್ಮೂರು ಶಾಲಾ ಮಕ್ಕಳ ವೇದಿಕೆಯಿಂದ ಪ್ರತಿ ವರ್ಷ ವಿಶ್ವ ರಂಗ ಭೂಮಿ ದಿನಾಚರಣೆ ವಿಶಿಷ್ಟ ರೀತಿಯಿಂದ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಗ್ರಾಮಸ್ಥರ ಕಲೆಯನ್ನು ಮಕ್ಕಳಲ್ಲಿ ಮೈಗೂಡಲಿ ಎನ್ನುವ ಉದ್ದೇಶದಿಂದ ಅವರನ್ನು ವೇದಿಕೆಗೆ ಕರೆತರಲಿದ್ದೇವೆ ಎಂದು ನಿರ್ದೇಶಕ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ತಿಳಿಸಿದ್ದಾರೆ.
ಮಾ.27ರಂದು ಜಾಕನಪಲ್ಲಿಯಲ್ಲಿ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮವನ್ನು ಕ್ರೀಯಾಶೀಲ ವೃತ್ತಿ ರಂಗಭೂಮಿ ನಿರ್ದೇಶಕರು ಮತ್ತು ಗದ್ದಗಿ ಅಳ್ಳೊಳ್ಳಿ ಮಠದ ನಾಗಪಯ್ಯ ಸ್ವಾಮಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾರ್ಮೋನಿಯಂ ಕಲಾವಿದ ಸೂರ್ಯಕಾಂತ ಹಂಗನಳ್ಳಿ, ರಂಗ ಕರ್ಮಿ ಪ್ರಭಾಕರ್ ಜೋಶಿಯವರು ಇಟಲಿಯ ದಾರಿಯೊ ಫೊ ಅವರ ಅಂತಾರಾಷ್ಟ್ರೀಯ ರಂಗ ಸಂದೇಶ- 2013ರನ್ನು ಓದಲಿದ್ದಾರೆ ಎಂದು ತಿಂಗಳ ಸಂಜೆ ವೇದಿಕೆ ಅದ್ಯಕ್ಷ ಚಂದ್ರಶೇಖರರೆಡ್ಡಿ ಆಡಕಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement