ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈಲಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

Lingaraj Badiger
Updated On : 27 Mar 2013, 10:45 am

ಗುಲ್ಬರ್ಗ/ಶಹಾಬಾದ್: ವಾಡಿಯ ರೇಲ್ವೆ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಕುರ್ಲಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಖಾಸಗಿ ವ್ಯಕ್ತಿಯ ಸಿಲಿಂಡರ್ ಸಿಡಿದ ಕಾರಣ ಪ್ರಯಾಣಿಕನೊಬ್ಬ ಗಾಯಗೊಂಡಿದ್ದಾನೆ.
ಗುಲ್ಬರ್ಗದಿಂದ ಯಾದಗಿರಿಗೆ ಹೊರಟಿದ್ದ ಸಾಹೇಬಗೌಡ ಅವರ ಪತ್ನಿ ಶಾಂತಮ್ಮ ಅವರು ರೇಲ್ವೆ ಭೋಗಿ ಸಂಖ್ಯೆ ಎಸ್8ರಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಏರಕಂಡಿಷನರ್‌ಗಳಿಗೆ ಬಳಸುವ ಸಿಲಿಂಡರನಲ್ಲಿ ಬಿರುಕು ಕಾಣಿಕೊಂಡು ಸಿಡಿದಿದ್ದರಿಂದ ಸಾಹೇಬಗೌಡ ಗಾಯಗೊಂಡಿದ್ದಾರೆ. ಸಿಲಿಂಡರ್ ಸಿಡಿದ ಶಬ್ದಕ್ಕೆ ರೈಲಿನಲ್ಲಿದ್ದ ಪ್ರಯಾಣಿಕರು ಪಕ್ಕದ ರೇಲ್ವೆ ಬೋಗಿಗಳಿಗೆ ಓಡಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ರೇಲ್ವೆ ಪ್ರಬಂಧಕ ಎಚ್.ಎಲ್. ಮೀನಾ, ರೇಲ್ವೆ ಸಿಪಿಐ ಶಿವಣ್ಣಗೌಡ, ಪಿಎಸ್‌ಐ ಎಂ.ಡಿ. ಹುಸೇನ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ, ಸಿಲಿಂಡರ್ ಸಾಗಿಸುತ್ತಿದ್ದ ವಾಸೀಮ್ ಎಂಬ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement