ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಹೋದರತ್ವ ಬೆಳೆಸಲು ಶ್ರಮಿಸಿ: ಬಗಾಲೆ

Lingaraj Badiger
Updated On : 27 Mar 2013, 10:45 am

ಗುಲ್ಬರ್ಗ: ಸಮಾಜದಲ್ಲಿ ಸಹೋದರತ್ವ ನಶಿಸಿ ಹೋಗುತ್ತಿರುವುದು ವಿಷಾದಕರ ಸಂಗತಿ. ಇದನ್ನು ಬೆಳೆಸಲು ನಾವೆಲ್ಲರೂ ಶ್ರಮಿಸಬೇಕೆಂದು ಪ್ರೊ. ಕೆ.ಎಸ್. ಬಗಾಲೆ ಹೇಳಿದರು. ಗುಲ್ಬರ್ಗ ಥಿಯಾಸೋಫಿಕಲ್ ಸೊಸೈಟಿ ವತಿಯಿಂದ ನಗರದ ಶೇಠ ಶಂಕರಲಾಲ್ ಲಾಹೋಟಿ ಕಾಲೇಜಿನಲ್ಲಿ ಒಂದು ದಿನದ ವ್ಯಾಸಂಗ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.  ಗೋಷ್ಠಿಯ ನಿರ್ದೇಶಕ ಡಾ.ಎಂ. ಗಂಗಾಧರ ಮೂರ್ತಿ ಅವರ ಇಹಪರ ಸಾಧನೆಗಳು ಎಂಬ ವಿಷಯದ ಮೇಲೆ ಸುದೀರ್ಘ ಉಪನ್ಯಾಸ ನೀಡಿದರು. ಪ್ರೊ. ರಾಘವೇಂದ್ರ ರಾಜಪುರೋಹಿತ ವೈರಾಗ್ಯ ಎಂಬ ವಿಷಯ ಕುರಿತು ಮಾತನಾಡಿದರು. ಸದಾಚಾರ ಎಂಬ ವಿಷಯದ ಮೇಲೆ ನಿವೃತ್ತ ಉಪನ್ಯಾಸಕ ವೀರಣ್ಣ ಎಂ. ಪಡಶೆಟ್ಟಿ ಉಪನ್ಯಾಸ ನೀಡಿದರೆ, ಪ್ರೇಮ ಎಂಬ ವಿಷಯದ ಮೇಲೆ ಪ್ರೊ. ವೀರಭೂಷಣ ಉಪನ್ಯಾಸ ನೀಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ವಿನೋದಕುಮಾರ ಜೇನವೇರಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಶ್ಲೇಷಿಸಿದರು. ಸಂಸ್ಥೆಯ ಅಧ್ಯಕ್ಷ ವೀರಣ್ಣ ಎಂ. ಪಡಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಡಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement