ಅಧಿಕಾರವಿದ್ದಾಗಲೇ ಜನಮೆಚ್ಚುಗೆ ಗಳಿಸಿ: ಹೂಗಾರ
ಕ.ಪ್ರ. ವಾರ್ತೆ, ಸುರಪುರ, ಮಾ.27
ಇಲ್ಲಿನ ಮೋಜಂಪುರ ವಾರ್ಡಿನಿಂದ ಪುರಸಭೆಗೆ ಆಯ್ಕೆಯಾದ ನೂತನ ಸದಸ್ಯ ದೇವಿಂದ್ರಪ್ಪ ಕಳ್ಳಿಮನಿ ಅವರನ್ನು ತಾಲೂಕು ಹೂಗಾರ ಸಮಾಜದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯ ಚನ್ನಪ್ಪ ಹೂಗಾರ ಮಾತನಾಡಿ, ವಾರ್ಡಿನ ಮತದಾರರು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. ವಾರ್ಡಿನ ನಾಗರಿಕರ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಯಾವುದೇ ತಾರತಮ್ಯ ಮಾಡದೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಬೇಕು. ಎಲ್ಲರನ್ನು ಸಮಾನತೆಯಿಂದ ಕಂಡು ಹೆಚ್ಚಿನ ಪ್ರೀತಿ ಗಳಿಸಬೇಕು. ವಾರ್ಡಿನ ನಾಗರಿಕರ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸಿ ಜನಮಾನಸದಲ್ಲಿ ಉಳಿಯಬೇಕೆಂದು ಸಲಹೆ ನೀಡಿದರು.
ಅಧಿಕಾರವಿದ್ದಾಗಲೇ ಜನಮೆಚ್ಚುಗೆ ಗಳಿಸಿ: ಅಧಿಕಾರ ಇದ್ದಾಗ ಅವಕಾಶಗಳನ್ನು ಬಳಿಸಿಕೊಂಡ ಜನಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು. ಇದರಿಂದ ನಿಮ್ಮ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಸರ್ಕಾರದಿಂದ ಪುರಸಭೆಗೆ ಬರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಸ್ವಉದ್ಯೋಗಕ್ಕಾಗಿ ಬರುವ ಯೋಜನೆಯನ್ನು ಯೋಗ್ಯರಿಗೆ ಒದಗಿಸಿ ಅವರ ಬದುಕಿಗೆ ನೆರವಾಗಬೇಕೆಂದು ಕಿವಿಮಾತು ಹೇಳಿದರು. ಸನ್ಮಾನ ಸ್ವೀಕರಿಸಿದ ಸದಸ್ಯ ದೇವಿಂದ್ರಪ್ಪ ಕಳ್ಳಿಮನಿ ಮಾತನಾಡಿ, ಸನ್ಮಾನ ಸತ್ಕಾರ ನನ್ನಲ್ಲಿ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿವೆ. ವಾರ್ಡಿನ ಜನತೆಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡುತ್ತೇನೆ. ಪುರಸಭೆಯಿಂದ ಸಿಗುವ ಲಾಭಗಳನ್ನು ಯೋಗ್ಯ ಫಲಾನುಭವಿಗಳಿಗೆ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತದಾರರ ನಂಬಿಕೆಗೆ ದ್ರೋಹ ಮಾಡಲಾರೆ ಎಂದು ಭರವಸೆ ನೀಡಿದರು. ಹೂಗಾರ ಸಮಾಜದ ತಾಲೂಕು ಚನ್ನಪ್ಪ ಹೂಗಾರ, ಮಲ್ಲಿಕಾರ್ಜುನ ದಿಂಡವಾರ, ಚನ್ನಬಸಪ್ಪ ಹೂಗಾರ, ಗಿರಿಧರ ಹೂಗಾರ, ವೆಂಕೋಬ ಹೂಗಾರ, ಹಣ್ಮಂತ್ರಾಯ ಹೂಗಾರ, ಬಸವರಾಜ ಹೂಗಾರ, ಶಂಕ್ರಪ್ಪ ಹೂಗಾರ, ಬಸವರಾಜ, ಬಲಭೀಮ, ಮಲ್ಲಿಕಾರ್ಜುನ ಕೊಡಮನಳ್ಳಿ, ರಮೇಶ ಇತರರಿದ್ದರು.